ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವ್ರು ಈ ಬಾರಿ ದೀಪಾವಳಿಗೆ ಸ್ವಲ್ಪ ಮೊದಲು ಅಭಿವೃದ್ಧಿ ಮತ್ತು ವಿಶ್ವಾಸದ ಮ್ಯಾರಥಾನ್ ಪ್ರವಾಸಗಳನ್ನ ಕೈಗೊಂಡಿದ್ದಾರೆ. ಐದು ದಿನಗಳಲ್ಲಿ, ಅವ್ರು ಮೂರು ರಾಜ್ಯಗಳಲ್ಲಿ ಹಲವು ಬ್ಯಾಕ್-ಟು-ಬ್ಯಾಕ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ತಮ್ಮ ಗುಜರಾತ್ ಭೇಟಿಯ ಅಂಗವಾಗಿ ಪ್ರಧಾನಮಂತ್ರಿಯವರು ಇಂದು ರಕ್ಷಣಾ ವಸ್ತುಪ್ರದರ್ಶನವನ್ನ ಉದ್ಘಾಟಿಸಿದರು. ನಂತ್ರ ಬನಸ್ಕಾಂತದಲ್ಲಿ ವಾಯುನೆಲೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇದರ ನಂತ್ರ ಪ್ರಧಾನಿ ಮೋದಿ ಅವ್ರು ಅದಲಾಜ್ನ ತ್ರಿಮಂದಿರದಲ್ಲಿ “ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್” ಉದ್ಘಾಟಿಸಿದರು. ಇಲ್ಲಿನ ತರಗತಿಯೊಂದರಲ್ಲಿ ಮಕ್ಕಳೊಂದಿಗೆ ಪ್ರಧಾನಿ ಕುಳಿತಿದ್ದರು. ಈ ಸಮಯದಲ್ಲಿ, ಅವರು ಕಲಿಸಿದ ಶಿಕ್ಷಕರೊಂದಿಗೆ ಚರ್ಚಿಸಿದರು. ಅಮೇಲೆ ಪ್ರಧಾನಿ ಮೋದಿ ಭಾಷಣ ಮಾಡಿದ್ರು.
ಅಮೃತ ಯುಗದ ಅಮೃತ ಪೀಳಿಗೆಯ ಸೃಷ್ಟಿಗೆ ಗುಜರಾತ್ ಹೆಜ್ಜೆ ಇಟ್ಟಿದೆ.!
ಇಂದು ಅಮೃತ್ ಕಾಲ ನ ಅಮೃತ ಪೀಳಿಗೆಯನ್ನ ನಿರ್ಮಿಸುವ ನಿಟ್ಟಿನಲ್ಲಿ ಗುಜರಾತ್ ಬಹಳ ದೊಡ್ಡ ಹೆಜ್ಜೆ ಇಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಅಭಿವೃದ್ಧಿ ಹೊಂದಿದ ಭಾರತಕ್ಕೆ, ಇದು ಅಭಿವೃದ್ಧಿ ಹೊಂದಿದ ಗುಜರಾತನ್ನ ನಿರ್ಮಿಸುವ ನಿಟ್ಟಿನಲ್ಲಿ ಒಂದು ಮೈಲಿಗಲ್ಲಾಗಲಿದೆ. ನಾವು ಮೊದಲ G ಯಿಂದ 4G ವರೆಗೆ ಇಂಟರ್ನೆಟ್ ಸೇವೆಗಳನ್ನ ಬಳಸಿದ್ದೇವೆ. ಈಗ 5ಜಿ ದೇಶದಲ್ಲಿ ದೊಡ್ಡ ಬದಲಾವಣೆಯನ್ನ ತರಲಿದೆ. ಇಂದು, 5ಜಿ, ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು, ಸ್ಮಾರ್ಟ್ ಬೋಧನೆ, ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಈಗ ವರ್ಚುಯಲ್ ರಿಯಾಲಿಟಿ, ಇಂಟರ್ನೆಟ್ ಆಫ್ ಥಿಂಗ್ಸ್ನ ಶಕ್ತಿಯನ್ನ ಸಹ ಶಾಲೆಗಳಲ್ಲಿ ಅನುಭವಿಸಬಹುದು.
ರಾಜ್ಕೋಟ್ನಲ್ಲಿ ಇಂಡಿಯಾ ಅರ್ಬನ್ ಹೌಸಿಂಗ್ ಕಾನ್ಕ್ಲೇವ್-2022 ಉದ್ಘಾಟಿಸಲಿರುವ ಪ್ರಧಾನಿ ಮೋದಿ
ನಂತರ, ಸಂಜೆ 6 ಗಂಟೆಗೆ, ಪ್ರಧಾನಮಂತ್ರಿಯವರು ರಾಜ್ಕೋಟ್ನಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ ‘ಭಾರತೀಯ ನಗರ ವಸತಿ ಸಮಾವೇಶ’-2022′ ಅನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವು ಎಲ್ಲಾ ಮಧ್ಯಸ್ಥಗಾರರಿಗೆ ತಮ್ಮ ತಂತ್ರಜ್ಞಾನವನ್ನ ಪ್ರದರ್ಶಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನ ಸಾಮಗ್ರಿಗಳು ಮತ್ತು ಪ್ರಕ್ರಿಯೆಗಳ ವಿವಿಧ ಆಯ್ಕೆಗಳ ಬಗ್ಗೆ ಚರ್ಚಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. 200ಕ್ಕೂ ಹೆಚ್ಚು ತಂತ್ರಜ್ಞಾನ ಪೂರೈಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮತ್ತು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಪ್ರಧಾನಮಂತ್ರಿಯವರು ರಾಜ್ ಕೋಟ್’ನಲ್ಲಿ ವಸ್ತುಪ್ರದರ್ಶನವನ್ನೂ ಉದ್ಘಾಟಿಸಲಿದ್ದಾರೆ.
ಅವರು ಗುಜರಾತ್ ನಲ್ಲಿ ಸುಮಾರು 15670 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಎರಡು ದಿನಗಳಲ್ಲಿ ಅವರು ಗುಜರಾತ್ ನಲ್ಲಿ ಸುಮಾರು 15,670 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗುರುವಾರ, 20 ರಂದು, ಅವರು ವ್ಯಾರಾದಲ್ಲಿ ಹಲವಾರು ಅಭಿವೃದ್ಧಿ ಉಪಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಕೆವಾಡಿಯಾದಲ್ಲಿ ‘ಮಿಷನ್ ಲೈಫ್’ಗೆ ಚಾಲನೆ ನೀಡಲಿದ್ದಾರೆ.