ಗಾಂಧಿನಗರ (ಗುಜರಾತ್): ರಕ್ಷಣಾ ಕ್ಷೇತ್ರದಲ್ಲಿ ದೇಶದ ಬೃಹತ್ ಪ್ರಗತಿಯ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು, 2014 ರಿಂದ ಭಾರತೀಯ ರಕ್ಷಣಾ ಉತ್ಪನ್ನಗಳ ರಫ್ತು ಎಂಟು ಪಟ್ಟು ಹೆಚ್ಚಾಗಿದೆ ಎಂದು ಇಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗಾಂಧಿನಗರದಲ್ಲಿ ‘ಡೆಫ್ ಎಕ್ಸ್ಪೋ 2022’ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, “DefExpo ನವ ಭಾರತದ ಭವ್ಯ ಚಿತ್ರವನ್ನು ಪ್ರದರ್ಶಿಸುತ್ತಿದೆ. ಇದು ರಾಷ್ಟ್ರದ ಅಭಿವೃದ್ಧಿ, ರಾಜ್ಯಗಳ ಭಾಗವಹಿಸುವಿಕೆ, ಯುವ ಶಕ್ತಿ, ಯುವ ಕನಸುಗಳು, ಯುವಕರ ಧೈರ್ಯ ಮತ್ತು ಯುವಕರ ಸಾಮರ್ಥ್ಯಗಳನ್ನು ಹೊಂದಿದೆ. ನಮ್ಮ ದೇಶದಲ್ಲಿ ಈ ಹಿಂದೆಯೂ ಡಿಫೆನ್ಸ್ ಎಕ್ಸ್ಪೋ ನಡೆಯುತ್ತಿತ್ತು ಆದರೆ DefExpo2022 ಅಭೂತಪೂರ್ವವಾಗಿದೆ. ಇದು ಹೊಸ ಆರಂಭದ ಸಂಕೇತವಾಗಿದೆ.” ಎಂದಿದ್ದಾರೆ.
ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ಭಾರತದ ಅತಿದೊಡ್ಡ ರಕ್ಷಣಾ ಪ್ರದರ್ಶನ – DefExpo 2022 ಅನ್ನು ಗುಜರಾತ್ನ ಗಾಂಧಿನಗರದಲ್ಲಿ ಆಯೋಜಿಸಲಾಗಿದೆ. ‘ಹೆಮ್ಮೆಯ ಹಾದಿ’ ಎಂಬ ವಿಷಯದ ಮೇಲೆ ಆಯೋಜಿಸಲಾಗಿರುವ ಈವೆಂಟ್ನ 12ನೇ ಆವೃತ್ತಿ ಇದಾಗಿದೆ.