ಗಾಜಿಯಾಬಾದ್ : ದೆಹಲಿ ಮಹಿಳೆಯೊಬ್ಬಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ.
BIGG NEWS : ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ
ಸಂತ್ರಸ್ತೆಯು ತನ್ನ ಸಹೋದರನ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಗಾಜಿಯಾಬಾದ್ ಹಿಂದಿರುಗುವ ಸಂದರ್ಭದಲ್ಲಿ ಬಸ್ ಗಾಗಿ ಕಾಯುತ್ತಿದ್ದಾಗ, ಸ್ಕಾರ್ಪಿಯೋದಲ್ಲಿ ಬಂದ ಐದು ಪುರುಷರು ಅವಳನ್ನು ಎಳೆದೊಯ್ದರು . ಅವಳನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದರು ಮತ್ತು ಅವಳ ಮೇಲೆ ಅತ್ಯಾಚಾರ ಎಸಗಿದರು ಎಂದು ಆರೋಪಿಸಲಾಗಿದೆ. ಬಳಿಕ ಆಕೆಯನ್ನು ಕೈಗಳು ಮತ್ತು ಕಾಲುಗಳನ್ನು ಕಟ್ಟಿಹಾಕಿ ಚೀಲದಲ್ಲಿ ತಂದು ರಸ್ತೆಯ ಮದ್ಯೆ ಬಿಟ್ಟುಹೋಗಿದ್ದರು . ಅಕ್ಟೋಬರ್ 18 ರಂದು, ಆಶ್ರಮ ರಸ್ತೆಯ ಬಳಿ ಮಹಿಳೆಯೊಬ್ಬರು ಮಲಗಿರುವ ಬಗ್ಗೆ ನಂದಗ್ರಾಮ್ (ಯುಪಿ) ಪೊಲೀಸರಿಗೆ ಮಾಹಿತಿ ಸಿಕ್ಕಿತು. ಪೊಲೀಸರು ಅವಳನ್ನು ಆಸ್ಪತ್ರೆಗೆ ಕರೆದೊಯ್ದರು. ಇದೀಗ ಮಹಿಳೆ ದೆಹಲಿಯ ಆಸ್ಪತ್ರೆಯಲ್ಲಿ ತನ್ನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
BIGG NEWS : ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 4 ಜನರನ್ನು ಬಂಧಿಸಲಾಗಿದ್ದು, ಎಫ್ಐಆರ್ ಕೂಡ ದಾಖಲಿಸಲಾಗಿದೆ.
ದೆಹಲಿ ಮಹಿಳಾ ಆಯೋಗವು ಆರೋಪಿಗಳ ವಿವರಗಳನ್ನು ಕೋರಿ ಗಾಜಿಯಾಬಾದ್ ಹಿರಿಯ ಪೊಲೀಸ್ ಅಧೀಕ್ಷಕರಿಗೆ ನೋಟಿಸ್ ನೀಡಿದೆ. “ಮಹಿಳೆಯು ರಕ್ತದ ಮಡುವಿನಲ್ಲಿ ತುಂಬಾ ಗಂಭೀರ ಸ್ಥಿತಿಯಲ್ಲಿದ್ದಳು, ಅವಳೊಳಗೆ ಕಬ್ಬಿಣದ ರಾಡ್ ಬಳಸಿದ್ದು, ಇನ್ನೂ ಇತ್ತು. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ” ಎಂದು ಸ್ವಾತಿ ಮಲಿವಾಲ್ ಕಳುಹಿಸಿದ ನೋಟಿಸ್ನಲ್ಲಿ ತಿಳಿಸಲಾಗಿದೆ.
BIGG NEWS : ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ