ಬೆಂಗಳೂರು : ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಾವು ಪಡೆಯುವ ಕಮಿಷನ್ನಿನ ಶೇಕಡಾದಷ್ಟಾದರೂ ಈಡೇರಿಸಿದ್ದರೆ ಸಾಕಿತ್ತು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಾವು ಪಡೆಯುವ ಕಮಿಷನ್ನಿನ ಶೇಕಡಾದಷ್ಟಾದರೂ ಈಡೇರಿಸಿದ್ದರೆ ಸಾಕಿತ್ತು. ಕಮಿಷನ್ 40% ಆದರೆ ಈಡೇರಿಸದೆ ಉಳಿದ ಭರವಸೆಗಳು 90%. ಅಭಿವೃದ್ಧಿಯಲ್ಲಿ ಕುರುಡಾಗಿರುವ ಸರ್ಕಾರ, ಪ್ರಶ್ನೆಗಳಿಗೆ ಕಿವುಡಾಗಿರುವ ಸಚಿವರು ತಮ್ಮದೇ ಭರವಸೆಗಳ ಬಗ್ಗೆ ಮತನಾಡುವರೇ? ಸಿಎಂ ಉತ್ತರಿಸುವರೇ? ಎಂದು ಪ್ರಶ್ನಿಸಿದೆ.
ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಾವು ಪಡೆಯುವ ಕಮಿಷನ್ನಿನ ಶೇಕಡಾದಷ್ಟಾದರೂ ಈಡೇರಿಸಿದ್ದರೆ ಸಾಕಿತ್ತು!
ಕಮಿಷನ್ 40% ಆದರೆ ಈಡೇರಿಸದೆ ಉಳಿದ ಭರವಸೆಗಳು 90%!
ಅಭಿವೃದ್ಧಿಯಲ್ಲಿ ಕುರುಡಾಗಿರುವ ಸರ್ಕಾರ, ಪ್ರಶ್ನೆಗಳಿಗೆ ಕಿವುಡಾಗಿರುವ ಸಚಿವರು ತಮ್ಮದೇ ಭರವಸೆಗಳ ಬಗ್ಗೆ ಮತನಾಡುವರೇ?
ಸಿಎಂ ಉತ್ತರಿಸುವರೇ?#SayCM pic.twitter.com/qRx2PEGNiC— Karnataka Congress (@INCKarnataka) October 19, 2022
ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 613 ಭರವಸೆಗಳಲ್ಲಿ 90% ನ್ನು ಪೂರೈಸಲಾಗದೆ ವಿಫವಾಗಿದೆ. ಹುಸಿಯಾಗಿಯೇ ಉಳಿದಿರುವ ಭರವಸೆಗಳ ಬಗ್ಗೆ ಸಿಎಂ ಉತ್ತರಿಸಬೇಕು ಎಂದು ಹೇಳಿದೆ.