ಹೈದರಾಬಾದ್: ಹೈದರಾಬಾದಿನ ಬಂಜಾರ ಹಿಲ್ಸ್ ಪ್ರದೇಶದ ಡಿಎವಿ ಪಬ್ಲಿಕ್ ಸ್ಕೂಲ್ನಲ್ಲಿ ನಾಲ್ಕು ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲ ಹಾಗೂ ಬಸ್ ಚಾಲಕನನ್ನು ಬಂಧಿಸಲಾಗಿದೆ.
ಎರಡು ತಿಂಗಳಿನಿಂದ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಬಾಲಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಕೆಲವು ದಿನಗಳಿಂದ ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆಯನ್ನು ಪೋಷಕರು ಗಮನಿಸಿದ್ದರು. ಈ ಬಗ್ಗೆ ಬಾಕಿಯನ್ನು ತಾಯಿ ವಿಚಾರಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಸೋಮವಾರ ಪ್ರಾಂಶುಪಾಲರ ಕೊಠಡಿಯ ಬಳಿ ಇರುವ ಡಿಜಿಟಲ್ ತರಗತಿ ಅಥವಾ ಲ್ಯಾಬ್ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮಂಗಳವಾರ ಪೋಷಕರು ಬಾಲಕಿಯೊಂದಿಗೆ ಶಾಲೆಗೆ ಹೋದಾಗ ಅವಳು ಚಾಲಕನ ಕಡೆಗೆ ಕೈ ಮಾಡಿ ತೋರಿಸಿದ್ದಾಳೆ. ಈ ಬಗ್ಗೆ ಪೋಷಕರು ದೂರು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿಯನ್ನು ಸಮಾಲೋಚನೆ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಬಾಲಕಿ ತನಗಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ.
BIGG NEWS: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ABCD ಕಲಿಸದ ಶಿಕ್ಷಕಿ: ಸ್ಕೂಲ್ ಪರಿಸ್ಥಿತಿ ಕಂಡು ಶಾಕ್ ಆದ ಎಸಿ