ರಾಯಚೂರು: ಜಿಲ್ಲೆಯ ಲಿಂಗನಖಾನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ರಾಯಚೂರು ಉಪವಿಭಾಗದ ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆಯ ಪರಿಸ್ಥಿತಿ ನೋಡಿ ಶಾಕ್ ಆಗಿದ್ದಾರೆ.
BIGG NEWS : `KPTCL’ ನೇಮಕಾತಿ ಅಕ್ರಮ : ಮತ್ತೆ ಇಬ್ಬರು ಆರೋಪಿಗಳು ಅರೆಸ್ಟ್
ಎರಡನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ) ವರ್ಣಮಾಲೆ ಪರಿಚಯವೇ ಮಾಡಿಕೊಟ್ಟಿಲ್ಲ. ಹೀಗಾಗಿ ಎಸಿ ದಿಢೀರ್ ಭೇಟಿ ನೀಡಿದ್ದು, ಶಿಕ್ಷಕರಿಗೆ ಗರಂ ಆಗಿದ್ದಾರೆ.
ಮಕ್ಕಳಿಗೆ ಎಬಿಸಿಡಿ ಓದಲು ಬರುವುದಿಲ್ಲ ಏನ್ ಕಲಿಸುತ್ತಿದ್ದಿರಿ ಎಂದು ಶಿಕ್ಷಕಿ ಹಾಗೂ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಸ್ಯೆಗಳನ್ನೇ ಹೇಳುತ್ತಿರುವುದನ್ನು ಬಿಟ್ಟು ಮಕ್ಕಳಿಗೆ ಕಲಿಸುವ ಕಡೆಯೂ ಗಮನಹರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
BIGG NEWS : `KPTCL’ ನೇಮಕಾತಿ ಅಕ್ರಮ : ಮತ್ತೆ ಇಬ್ಬರು ಆರೋಪಿಗಳು ಅರೆಸ್ಟ್
ಕೋವಿಡ್ ನಿಂದಾಗಿ ಎರಡು ವರ್ಷದಿಂದ ಮಕ್ಕಳು ಓದಿನಲ್ಲಿ ಹಿಂದೆ ಬಿದ್ದಿದ್ದಾರೆ. ನಾನೇ ಶಿಕ್ಷಕನಾಗಿ ಬರಲೇ ಎರಡೇ ದಿನದಲ್ಲಿ ಎಬಿಸಿಡಿ ಕಲಿಸುತ್ತೇನೆ. ಒಂದು ವಾರದೊಳಗೆ ಮಕ್ಕಳಿಗೆ ಎಬಿಸಿಡಿ ಕಲಿಸಬೇಕು. ಮಕ್ಕಳು ಪಟಪಟನೆ ಎಬಿಸಿಡಿ ಹೇಳುವುದನ್ನು ವೀಡಿಯೋ ಮಾಡಿ ಕಳುಹಿಸಿ ಎಂದು ತಾಕೀತು ಮಾಡಿದರು. ಶಾಲೆಯ ಶಿಕ್ಷಕರ ಕೊರತೆ ಬಗ್ಗೆ ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆಮಾಡಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಎಸಿ ಸೂಚಿಸಿದ್ದಾರೆ.