ಬೆಂಗಳೂರು: #PayCM ಈಗ SayCM ಆಗಲಿ, ರಾಜ್ಯದ ಜನತೆಗೆ ಉತ್ತರ ನೀಡಲಿ. ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನಭ್ರಷ್ಟರಾದ ಬಿಜೆಪಿ ( BJP ) ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ. ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರೇ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಆಗ್ರಹಿಸಿದೆ.
#PayCM ಈಗ SayCM ಆಗಲಿ,
ರಾಜ್ಯದ ಜನತೆಗೆ ಉತ್ತರ ನೀಡಲಿ.ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನಭ್ರಷ್ಟರಾದ @BJP4Karnataka ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ.
ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ @BSBommai ಅವರೇ?#NimHatraIdyaUttara pic.twitter.com/0keKfjZcT2
— Karnataka Congress (@INCKarnataka) October 18, 2022
ಈ ಕುರಿತಂತೆ ಇಂದು ಟ್ವಿಟ್ ಮಾಡಿದ್ದು, ಮ್ಯಾನೇಜ್ಮೆಂಟ್ ಸರ್ಕಾರ. ಬ್ಲಾಕ್ಮೇಲ್ ಸರ್ಕಾರ. 40% ಕಮಿಷನ್ ಸರ್ಕಾರ. ತಳ್ಳುವ ಸರ್ಕಾರ. ಸಿಡಿ ಸರ್ಕಾರ. ಇವೆಲ್ಲವೂ ಬಿಜೆಪಿಯವರೇ ತಮ್ಮ ಸರ್ಕಾರಕ್ಕೆ ನೀಡಿದ ಬಿರುದುಗಳು! ವಚನಭ್ರಷ್ಟತೆಯ ಬಗ್ಗೆ, ವೈಫಲ್ಯದ ಸತ್ಯದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಲೂ ಸಹ ಕಮಿಷನ್ ನೀಡಬೇಕೇ ಬಿಜೆಪಿ ಎಂದು ಒತ್ತಾಯಿಸಿದೆ.
◆ಮ್ಯಾನೇಜ್ಮೆಂಟ್ ಸರ್ಕಾರ
◆ಬ್ಲಾಕ್ಮೇಲ್ ಸರ್ಕಾರ
◆40% ಕಮಿಷನ್ ಸರ್ಕಾರ
◆ತಳ್ಳುವ ಸರ್ಕಾರ
◆ಸಿಡಿ ಸರ್ಕಾರ
ಇವೆಲ್ಲವೂ ಬಿಜೆಪಿಯವರೇ ತಮ್ಮ ಸರ್ಕಾರಕ್ಕೆ ನೀಡಿದ ಬಿರುದುಗಳು!ವಚನಭ್ರಷ್ಟತೆಯ ಬಗ್ಗೆ, ವೈಫಲ್ಯದ ಸತ್ಯದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಲೂ ಸಹ ಕಮಿಷನ್ ನೀಡಬೇಕೇ @BJP4Karnataka?#NimHatraIdyaUttara pic.twitter.com/EfuwFksnL7
— Karnataka Congress (@INCKarnataka) October 18, 2022
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಪೂರೈಸಲು ಸಮಿತಿ ರಚಿಸಿ, ಪರಿಹಾರ ಒದಗಿಸುತ್ತೇವೆ ಎಂದಿತ್ತು ಬಿಜೆಪಿ. ಅವರು ಬೀದಿಗಿಳಿದು ವಾರಗಟ್ಟಲೆ ಹೋರಾಟ ಮಾಡಿದ್ದರು, ಅವರ ಗೋಳು ಕೇಳಲು ಯಾವ ಸಮಿತಿಯೂ ಬರಲಿಲ್ಲ, ಯಾವ ಸಚಿವರೂ ಕೇಳಲಿಲ್ಲ. ಸಮಿತಿ ರಚನೆಗೆ ಇನ್ನೂ ಮುಹೂರ್ತ ಕೂಡಿ ಬರಲಿಲ್ಲವೇ ಎಂದು ಕೇಳಿದೆ.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಪೂರೈಸಲು ಸಮಿತಿ ರಚಿಸಿ, ಪರಿಹಾರ ಒದಗಿಸುತ್ತೇವೆ ಎಂದಿತ್ತು ಬಿಜೆಪಿ.
ಅವರು ಬೀದಿಗಿಳಿದು ವಾರಗಟ್ಟಲೆ ಹೋರಾಟ ಮಾಡಿದ್ದರು, ಅವರ ಗೋಳು ಕೇಳಲು ಯಾವ ಸಮಿತಿಯೂ ಬರಲಿಲ್ಲ, ಯಾವ ಸಚಿವರೂ ಕೇಳಲಿಲ್ಲ.
ಸಮಿತಿ ರಚನೆಗೆ ಇನ್ನೂ ಮುಹೂರ್ತ ಕೂಡಿ ಬರಲಿಲ್ಲವೇ @BJP4Karnataka?#NimHatraIdyaUttara pic.twitter.com/JRPoJEyBIM
— Karnataka Congress (@INCKarnataka) October 18, 2022