ಮೈಸೂರು: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಧಾರಾಕಾರ ಸುರಿಯುತ್ತಿದೆ. ಇದರ ಪರಿಣಾಮವಾಗಿ ಮೈಸೂರು ಅರಮನೆಯ ಆವರಣದ ಕೋಟೆ ಗೋಡೆ ಕುಸಿತವಾಗಿದೆ.
BIGG NEWS: ಬೀದರ್ ನಲ್ಲಿ ವಾರದಿಂದ ಭೂಮಿಯೊಳಗಿಂದ ಕೇಳಿಬರುತ್ತಿದೆ ಶಬ್ದ; ಜನರಲ್ಲಿ ಆತಂಕ
ಅರಮನೆ ಹೊರ ಆವರಣದಲ್ಲಿನ ಕೋಟೆ ಮಾರಮ್ಮ ದೇಗುಲ ಹಾಗೂ ಜಯಮಾರ್ತಾಂಡ ದ್ವಾರದ ಮಧ್ಯದಲ್ಲಿ ಬರುವ ಕೋಟೆಯ ಗೋಡೆ ಕುಸಿದಿದೆ. ಮೈಸೂರು ಅರಮನೆಯ ಸುತ್ತಲೂ ನಿರ್ಮಾಣ ಮಾಡಿರುವ ಕೋಟೆ ಇದ್ದಾಗಿದ್ದು, ಅಂದಿನ ಆರಸರ ಕಾಲದಲ್ಲಿ ಅರಮನೆಯ ರಕ್ಷಣೆಗಾಗಿ ನಿರ್ಮಿಸಲಾಗಿತ್ತು.
ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿದ್ದ ಕೋಟೆ ಇದಾಗಿತ್ತು. ಆದರೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಮದಾಗಿ ಕೋಟೆ ಗೋಡೆ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ಕುಸಿದಿರುವ ಭಾಗಕ್ಕೆ ಟಾರ್ಪಲ್ ಹೊದಿಸಲಾಗಿದೆ.