ಮೈಸೂರು : ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( Puneeth Rajkumar ) ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ( Social Media ) ಅವಹೇಳನಕಾರಿ ವಿಡಿಯೋ ಮಾಡಿ ಹರಿಬಿಟ್ಟ ಕಿಡಿಗೇಡಿ ಬಂಧನಕ್ಕೆ ಅಪ್ಪು ಅಭಿಮಾನಿಗಳು ಆಗ್ರಹಿಸಿದ್ದಾರೆ. ಅಪ್ಪು ಬಗ್ಗೆ ಮಾಡಿದಂತ ಅವಮಾನದಿಂದ ಎಚ್ಚೆತ್ತುಕೊಂಡಿರುವಂತ ವ್ಯಕ್ತಿ ಸ್ಥಿತಿ ಏನಾಯ್ತು ಅಂತ ಮುಂದೆ ಓದಿ.
ಪುನೀತ್ ವಿರುದ್ಧ ನಟ ದರ್ಶನ್ ( Actor Darshan ) ಅಭಿಮಾನಿ ಎಂದು ಹೇಳಿಕೊಂಡಿರುವ ಯುವಕನೋರ್ವಅವಹೇಳನಕಾರಿಯಾಗಿ ಮಾತನಾಡಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪುನೀತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಮಾಡಿರುವ ನಟ ದರ್ಶನ್ ಅಭಿಮಾನಿ ಪುಟ್ಟ ಎಂಬಾತನ ಮನೆಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ( Puneeth Rajkumar fans ) ಮುತ್ತಿಗೆ ಹಾಕಿದ್ದು, ಆತನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಹೊರವಲಯದ ಬೆಳವಾಡಿ ಗ್ರಾಮದ ಹೆದ್ದಾರಿಯಲ್ಲಿ ಅಪ್ಪು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಫೋಟೋ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ವಿಡಿಯೋ ಮಾಡಿ ಹರಿಬಿಟ್ಟ ಕಿಡಿಗೇಡಿ ಬಂಧನಕ್ಕೆ ಅಪ್ಪು ಅಭಿಮಾನಿಗಳು ಆಗ್ರಹಿಸಿದ್ದರು.
ಈ ಬೆನ್ನಲ್ಲೇ ಅಪ್ಪು ಅಭಿಮಾನಿಗಳ ಆಕ್ರೋಶದಿಂದಾಗಿ ಎಚ್ಚೆತ್ತುಕೊಂಡಿರುವಂತ ಲಿಂಗದೇವರುಕೊಪ್ಪಲಿನ ಪುಟ್ಟ ಎಂಬಾತ, ಅಪ್ಪು ಪೋಟೋಗೆ ಪೂಜೆ ಮಾಡಿ, ಅಭಿಮಾನಿಗಳ ಕ್ಷಮೆ ಕೋರಿದ್ದಾನೆ. ಅಲ್ಲದೇ ಇದೊಂದು ಸಲ ಬಿಟ್ಟು ಬಿಡಿ, ಇಂತಹ ತಪ್ಪು ಇನ್ಯಾವತ್ತೂ ಮಾಡೋದಿಲ್ಲ. ನಿಜವಾಗಲೂ ಲೈಫ್ ನಲ್ಲಿ ಇನ್ಯಾವತ್ತೂ ಈ ತರ ತಪ್ಪು ಮಾಡಲ್ಲ, ದಯವಿಟ್ಟು ಕ್ಷಮಿಸಿ ಎಂಬುದಾಗಿ ಕ್ಷಮೆ ಕೋರಿದ್ದಾನೆ.
ಇದಷ್ಟೇ ಅಲ್ಲದೇ ನಾನು ಇನ್ಮುಂದೆ ಯಾವುದೇ ನಟರ ಬಗ್ಗೆಯೂ ಈ ರೀತಿ ಅವಹೇಳನಕಾರಿಯಾಗಿ ಮಾತನಾಡೋದಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ. ನಮ್ಮ ಅಪ್ಪ-ಅಮ್ಮ ತುಂಬಾ ಹೆದರಿಕೊಂಡಿದ್ದಾರೆ. ಈ ಒಂದು ಸಾರಿ ನನ್ನ ತಪ್ಪು ಮನ್ನಿಸಿ, ಇನ್ನೂ ನನ್ನ ಲೈಫ್ ನಲ್ಲಿ ಯಾವತ್ತೂ ಹೀಗೆ ಯಾರ ಬಗ್ಗೆಯೂ ಮಾತನಾಡೋದಿಲ್ಲ. ಪ್ಲೀಸ್ ಬಿಟ್ಟು ಬಿಡಿ, ಅಪ್ಪುಗೆ ಅವಮಾನದ ರೀತಿಯಲ್ಲಿ ಮಾತನಾಡಿದ್ದರೇ ಕ್ಷಮೆ ಇರಲಿ ಎಂಬುದಾಗಿ ಗೋಗರೆದಿದ್ದಾನೆ.
ಅಂದಹಾಗೇ, ಅಕ್ಟೋಬರ್ 29 ರಂದು ಬೆಳಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಅಭಿಮಾನಿಗಳ ನೆಚ್ಚಿನ ಅಪ್ಪು ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಇನ್ನೂ ಕೂಡ ಈ ಘಟನೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ, ಇದರ ನಡುವೆ ಇಂತಹ ಕಿಡಿಗೇಡಿಗಳು ಅಪ್ಪು ವಿರುದ್ಧ ಮಾತನಾಡಿದ್ದು, ಅಪ್ಪು ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಬಹುಷಃ ಪುನೀತ್ ರಾಜ್ ಕುಮಾರ್ ಅವರ ಸಾವಿಗೆ ಮಿಡಿದಷ್ಟು ಮನಗಳು ಇಡೀ ದೇಶದಲ್ಲಿ ಯಾರ ಸಾವಿಗೆ ಮಿಡಿದಿರಲಿಲ್ಲ.
ಚಿತ್ರದುರ್ಗ: ನಾಳೆ ಹಿರಿಯೂರು ತಾಲೂಕಿನಲ್ಲಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut