ಬಳ್ಳಾರಿ: ಸಾರಿಗೆ ಸಚಿವ ಬಿ.ಶ್ರೀರಾಮುಲು ( Minister B Sriramulu ) ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಸಚಿವರ ವಿರುದ್ಧ ಜಮೀನು ಭೂ ಕಬಳಿಕೆ ಆರೋಪ ಮಾಡಲಾಗಿದ್ದು, ಬರೋಬ್ಬರಿ 6 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ಬಿಡುಗಡೆ ಮಾಡಿದೆ.
ಬಳ್ಳಾರಿಯಲ್ಲಿ ಇಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ( V S Ugrappa ) ಅವರು ಸುದ್ದಿಗೋಷ್ಠಿ ನಡೆಸಿ ಸಚಿವ ಶ್ರೀರಾಮುಲು ವಿರುದ್ಧ ಜಮೀನು ಕಬಳಿಕೆ ಆರೋಪದ ಸಂಬಂಧ 6 ಸಾವಿರ ಪುಟಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿದರು.
ಸಾಕುಪ್ರಾಣಿ ಪೋಷಕರೇ ಎಚ್ಚರ..! ಕೇವಲ 1 ನಾಯಿಗೆ ಮಾತ್ರ ಅವಕಾಶ, ಗಾಜಿಯಾಬಾದ್ ಹೊಸ ಮಾರ್ಗಸೂಚಿ ಬಿಡುಗಡೆ : ಇಲ್ಲಿವೆ ಓದಿ
ಈ ಬಳಿಕ ಮಾತನಾಡಿದಂತ ಅವರು, ಸಚಿವ ಬಿ. ಶ್ರೀರಾಮುಲು ಜಮೀನು ಕಬಳಿಕೆ ಮಾಡಲಾಗಿದೆ. ಈ ಸಂಬಂಧ ಕಳೆದ ಮಾರ್ಟ್ ನಲ್ಲಿಯೇ ಬಳ್ಳಾರಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಆಗಿದೆ ಎಂದರು.
ಶ್ರೀರಾಮುಲು ವಿರುದ್ಧ 6 ಸಾವಿರ ಪುಟಗಳ ದೋಷಾರೋಪಣ ಪಟ್ಟಿ ಬಿಡುಗಡೆ ಮಾಡಲಾಗಿದೆ. ರಾಮುಲು ಅವರೇ ಪ್ರಕರಣ ಸಂಬಂಧ ರಾಜೀನಾಮೆ ನೀಡಲಿ, ಇಲ್ಲವೇ ಸಿಎಂ ಬಸವರಾಜ ಬೊಮ್ಮಾಯಿ ವಜಾಗೊಳಿಸಲಿ ಎಂದು ಆಗ್ರಹಿಸಿದರು.
‘ದೀಪಾವಳಿ ಹಬ್ಬ’ಕ್ಕೆ ಊರಿಗೆ ಹೋಗುವವರ ಗಮನಕ್ಕೆ: KSRTCಯಿಂದ ‘1500 ಹೆಚ್ಚುವರಿ ಬಸ್ ಸಂಚಾರ
ಜಮೀನು ಕಬಳಿಕೆ ಸಂಬಂಧ ಈಗಾಗಲೇ ಕಳೆದ ಮಾರ್ಚ್ ನಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣದಲ್ಲಿ ಎ6 ಆರೋಪಿಯಾಗಿರುವಂತ ಶ್ರೀರಾಮುಲು ಜಾಮೀನಿನಲ್ಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಬಗ್ಗೆ ಮಾತನಾಡುವಂತ ಸಚಿವ ಬಿ ಶ್ರೀರಾಮುಲು ಸತ್ಯಹರಿಶ್ಚತ್ರನೇನು ಅಲ್ಲ. ವಾಲ್ಮೀಕಿ ಸಮಾಜಕ್ಕೆ ಶ್ರೀರಾಮುಲು ಕೆಟ್ಟ ಹೆಸರು ತಂದಿದ್ದಾರೆ. ಕಾನೂನು ಮೇಲೆ ಗೌರವ ಇದ್ದರೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಜಮೀನು ಕಬಳಿಕೆ ಸಂಬಂಧ ಶ್ರೀರಾಮುಲು ಬಗ್ಗೆ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಜನತಾ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.