ಶಿವಮೊಗ್ಗ: ಜಿಲ್ಲೆಯ ಮಲ್ಲಿಗೇನಹಳ್ಳಿಯ ಅಂಬೇಡ್ಕರ್ ಕಾಲೋನಿಯ ಬಳಿಯಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ, ಇಂದು ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದ್ರೇ ಒತ್ತುವರಿ ತೆರವಿಗೆ ಅಲ್ಲಿನ ನಿವಾಸಿಗಳು ಭಾರೀ ವಿರೋಧ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ತೆರವು ಕಾರ್ಯಾಚರಣೆ ಮುಂದುವರೆಸಿದ್ರೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿಯೂ ಯತ್ನಿಸಿರುವಂತ ಘಟನೆ ನಡೆದಿದೆ.
ಸಾಕುಪ್ರಾಣಿ ಪೋಷಕರೇ ಎಚ್ಚರ..! ಕೇವಲ 1 ನಾಯಿಗೆ ಮಾತ್ರ ಅವಕಾಶ, ಗಾಜಿಯಾಬಾದ್ ಹೊಸ ಮಾರ್ಗಸೂಚಿ ಬಿಡುಗಡೆ : ಇಲ್ಲಿವೆ ಓದಿ
ಇಂದು ಶಿವಮೊಗ್ಗ ತಾಲೂಕಿನ ಮಲ್ಲಿಗೇನಹಳ್ಳಿ ಬಳಿಯಲ್ಲಿನ ಅಂಬೇಡ್ಕರ್ ಕಾಲೋನಿ ಬಳಿಯಲ್ಲಿ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಈ ವೇಳೆ ಅಲ್ಲಿನ ನಿವಾಸಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆದ್ರೇ ಪ್ರತಿಭಟನೆಗೂ ಜಗ್ಗದೇ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಮುಂದುವರೆಸಿದ್ದರು.
ಸಾಕುಪ್ರಾಣಿ ಪೋಷಕರೇ ಎಚ್ಚರ..! ಕೇವಲ 1 ನಾಯಿಗೆ ಮಾತ್ರ ಅವಕಾಶ, ಗಾಜಿಯಾಬಾದ್ ಹೊಸ ಮಾರ್ಗಸೂಚಿ ಬಿಡುಗಡೆ : ಇಲ್ಲಿವೆ ಓದಿ
ಒತ್ತುವರಿ ತೆರವು ಕಾರ್ಯಾಚರಣೆ ಮುಂದುವಿಸಿದಂತ ವೇಳೆಯಲ್ಲಿ ಅಂಬೇಡ್ಕರ್ ಕಾಲೋನಿಯ ನಿವಾಸಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದನು. ಕೂಡಲೇ ಆತನನ್ನು ಪೊಲೀಸರು ರಕ್ಷಸಿ, ತಮ್ಮ ವಶಕ್ಕೆ ಪಡೆದರು. ಇದೀಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದರೇ, ಇದಕ್ಕೆ ವಿರೋಧಿಸಿ ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.