ಬೆಂಗಳೂರು: ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election 2022 ) ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವಂತ ಸುಳಿವನ್ನು ಶಾಸಕ ಯತೀಂದ್ರ ( MLA Yathindra Siddaramaiah ) ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದಂತ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಅವರು, ಅಪ್ಪ ವರುಣಾ ಕ್ಷೇತ್ರದಿಂದ ಮುಂಬರುವಂತ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ರೇ, ನಾನು ಅವರಿಗಾಗಿ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ. ಆ ಬಳಿಕ ನಾನು ಎಲ್ಲಿಯೂ ಸ್ಪರ್ಧಿಸೋದಿಲ್ಲ ಎಂಬುದಾಗಿ ಹೇಳಿದ್ದಾರೆ.
ಸಾಕುಪ್ರಾಣಿ ಪೋಷಕರೇ ಎಚ್ಚರ..! ಕೇವಲ 1 ನಾಯಿಗೆ ಮಾತ್ರ ಅವಕಾಶ, ಗಾಜಿಯಾಬಾದ್ ಹೊಸ ಮಾರ್ಗಸೂಚಿ ಬಿಡುಗಡೆ : ಇಲ್ಲಿವೆ ಓದಿ
ನಾನು ತಂದೆ ಸಿದ್ಧರಾಮಯ್ಯ ಅವರ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಕ್ಷೇತ್ರ ತ್ಯಾಗ ಅಂತ ಏನಿಲ್ಲ. ಬೇರೆಯವರಿದ್ದರೂ ಬಿಟ್ಟುಕೊಡ್ತಾ ಇದ್ದರು. ಪಕ್ಷದ ಕಾರ್ಯಕರ್ತನಾಗಿ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದರು.
ಅಪ್ಪಾಜಿಯವರು ವರುಣಾ ಕ್ಷೇತ್ರ ಅಥವಾ ಬೇರೆ ಕಡೆಯಾದರೂ ನಿಲ್ಲಬಹುದು. ಅವರು ಎಲ್ಲಿ ನಿಲ್ಲಬೇಕೆಂಬುದು ಇನ್ನೂ ತೀರ್ಮಾನವಾಗಿಲ್ಲ ಎಂಬುದಾಗಿ ಹೇಳಿದರು. ಈ ಮೂಲಕ ಸಿದ್ಧರಾಮಯ್ಯ ಮುಂದಿನ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸ್ಪರ್ಧಿಸಲಿರೋ ಸುಳಿವನ್ನು ನೀಡಿದ್ದಾರೆ.