ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನದಲ್ಲಿ ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಜೊತೆಗೆ ತ್ವಚೆ ಎರಡರ ಮೇಲೂ ಪರಿಣಾಮ ಬೀರುತ್ತದೆ.
ಬದಲಾಗುವ ಹವಾಮಾನಕ್ಕೆ ತಕ್ಕಂತೆ ನಾವು ಉಡುಪು, ಆಹಾರ ಎಲ್ಲಾ ವಿಚಾರದಲ್ಲೂ ಗ್ರತೆ ವಹಿಸಬೇಕು. ಹಾಗೇ ಚಳಿಗಾದಲ್ಲಿ ಕೂಡಾ. ತಣ್ಣನೆಯ ಗಾಳಿಯಿಂದ ಚರ್ಮವು ಒಣಗಿ ನಿರ್ಜೀವವಾಗುತ್ತದೆ. ಇದರಿಂದ ಚರ್ಮ ಬಹಳ ಶುಷ್ಕವಾಗಿರುತ್ತದೆ.
ಒಣ ಚರ್ಮದಿಂದ ತುರಿಕೆ ಉಂಟಾಗಬಹುದು. ಹೆಚ್ಚಾಗಿ ತುಟಿಗಳು, ಕೆನ್ನೆ ಮತ್ತು ಹಣೆಯ ಸುತ್ತಲೂ ಒಣ ಚರ್ಮ ಕಂಡುಬರುತ್ತದೆ. ಈ ಸಮಯದಲ್ಲಿ ಚರ್ಮದ ಮೇಲೆ ಮಾಯಿಶ್ಚರೈಸರ್ ಸಾಕಾಗುವುದಿಲ್ಲ. ಬದಲಾಗುತ್ತಿರುವ ಋತುಗಳಲ್ಲಿ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಳಜಿಯ ಅಗತ್ಯವಿದೆ.
ಈ ಋತುವಿನಲ್ಲಿ ತ್ವಚೆಯನ್ನು ಹೈಡ್ರೇಟ್ ಆಗಿಡಲು ಆಹಾರ ಕ್ರಮ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.ಋತುವಿನಲ್ಲಿ ಚರ್ಮವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಲು ಯಾವ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ನೋಡೋಣ.
ಚರ್ಮಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ
ತೆಂಗಿನೆಣ್ಣೆಯು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದು ಜಿಗುಟಾದ, ತೆಂಗಿನಕಾಯಿ ಕೊಬ್ಬನ್ನು ಹೊಂದಿರುತ್ತದೆ. ಇದನ್ನು ಬಳಸುವುದರಿಂದ ಚರ್ಮ ಮೃದುವಾಗುತ್ತದೆ. ಒಣ ತ್ವಚೆಯಿಂದ ಪರಿಹಾರ ಪಡೆಯಲು ತೆಂಗಿನೆಣ್ಣೆ ಬಹಳ ಪರಿಣಾಮಕಾರಿಯಾಗಿದೆ. ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಅರ್ಧ ಚಮಚ ಎಣ್ಣೆಯನ್ನು ಎರಡೂ ಕೈಗಳಿಗೆ ಹಚ್ಚಿಕೊಂಡು ನಿಮ್ಮ ಕೈ ಕಾಲುಗಳಿಗೆ ಹಚ್ಚಿ ಒಂದೆರಡು ನಿಮಿಷ ಮಸಾಜ್ ಮಾಡಿ. ಬೆಳಗ್ಗೆ ಎದ್ದು ಸ್ನಾನ ಮಾಡಿ.
ಒಣಚರ್ಮದಿಂದ ಮುಕ್ತಿ ಪಡೆಯಲು ಜೇನುತುಪ್ಪ ಬಳಸಿ
ಜೇನುತುಪ್ಪವು ಆರೋಗ್ಯಕ್ಕೆ ಮಾತ್ರವಲ್ಲ ಚರ್ಮದ ಸಮಸ್ಯೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಚರ್ಮದ ಮೇಲೆ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಚರ್ಮಕ್ಕೆ ಪೋಷಣೆ ದೊರೆಯುತ್ತದೆ.
ಪೆಟ್ರೋಲಿಯಂ ಜೆಲ್ಲಿ ಮಸಾಜ್
ಪೆಟ್ರೋಲಿಯಂ ಜೆಲ್ಲಿ ಚರ್ಮದ ಮೇಲೆ ಔಷಧಿಯಂತೆ ಕೆಲಸ ಮಾಡುತ್ತದೆ. ಒಣ ತ್ವಚೆಯನ್ನು ಹೋಗಲಾಡಿಸಲು ಪೆಟ್ರೋಲಿಯಂ ಜೆಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದನ್ನು ತ್ವಚೆಗೆ ಬಳಸುವುದರಿಂದ ಚರ್ಮ ಒಣಗುವುದನ್ನು ತಡೆಯುತ್ತದೆ. ಚರ್ಮದ ಕಿರಿಕಿರಿಯನ್ನು ಕೂಡಾ ಕಡಿಮೆ ಮಾಡುತ್ತದೆ.