ಬೆಂಗಳೂರು: ರಾಜ್ಯಾದ್ಯಂತ ಕೆಳದ ಎರಡು ವರ್ಷದಿಂದ ಮಳೆ ಸುರಿಯುತ್ತಿದೆ. ಈ ನಡುವೆ ರಸ್ತೆಗುಂಡಿಗಳ ಸಮಸ್ಯೆ ತೀವ್ರಗೊಂಡಿದೆ. ಜನರ ಜೀವ ತೆಗೆಯಲು ಬಾಯ್ತೆರದು ನಿಂತಂತಿವೆ. ರಸ್ತೆ ಗುಂಡಿ ಮುಚ್ಚಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ ವಿರುದ್ಧ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
BIGG NEWS: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಡಿ.ಕೆ ಶಿವಕುಮಾರ್ ಮತದಾನ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಂಡ ವಸೂಲಿ ಮಾಡಲು ನಿಮ್ಮ ಬಳಿ ಸಿಬ್ಬಂದಿಗಳಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಸಿಬ್ಬಂದಿಗಳಿಲ್ವಾ? ಬೆಂಗಳೂರಿನಲ್ಲಿ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ರಸ್ತೆಗಳ ಪರಿಸ್ಥಿತಿ ಹೀಗೇ ಆಗಿದೆ. ರಸ್ತೆ ತುಂಬೆಲ್ಲ ಗುಂಡಿಗಳಿವೆ. ರಸ್ತೆ ಗುಂಡಿ ಮುಚ್ಚೋದ್ರಲ್ಲೂ ಪರ್ಸಂಟೇಜ್ ನಡಿತಿದ್ಯಾ? ಎಂದು ಪ್ರಶ್ನಿಸಿದ್ದಾರೆ.