ಗಾಜಿಯಾಬಾದ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಗಾಜಿಯಾಬಾದ್ ಮುನಿಸಿಪಲ್ ಕಾರ್ಪೊರೇಷನ್ನಲ್ಲಿ ಇತ್ತೀಚೆಗೆ ಜನರ ಮೇಲೆ ಸಾಕುನಾಯಿಗಳ ದಾಳಿ, ಕಚ್ಚುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸ್ಥಳೀಯ ಆಡಳಿತವು ಪಿಟ್ ಬುಲ್, ರಾಟ್ವೀಲರ್ ಮತ್ತು ಡೋಗೊ ಅರ್ಜೆಂಟಿನೋ ತಳಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ನಿಷೇಧಿಸಿದೆ.
ಸಾಕುಪ್ರಾಣಿಗಳ ಮಾಲೀಕರಿಗೆ ನಾಗರಿಕ ಸಂಸ್ಥೆಯು ಶನಿವಾರ ಇತರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರ ಪ್ರಕಾರ, ಯಾವುದೇ ಕುಟುಂಬವು ಒಂದಕ್ಕಿಂತ ಹೆಚ್ಚು ಸಾಕು ನಾಯಿಗಳನ್ನು ಸಾಕುವಂತಿಲ್ಲ. ಅವರು ತಮ್ಮ ನಾಯಿಗಳಿಗೆ ಕಡ್ಡಾಯವಾಗಿ ಲೈಸನ್ಸ್ ಪಡೆಯಬೇಕು. ಅದನ್ನು ನವೆಂಬರ್ 1 ರಿಂದ ನೀಡಲಾಗುವುದು. ಹೊಸ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗಾಜಿಯಾಬಾದ್ ನಗರಾಡಳಿತವು ಸ್ಪಷ್ಟಪಡಿಸಿದೆ.
ಎತ್ತರದ ಕಟ್ಟಡಗಳಲ್ಲಿ ವಾಸಿಸುತ್ತಿರುವವರು ನಾಯಿಗಳನ್ನು ಹೊರಗೆ ಕರೆದೊಯ್ಯಲು ಕಡ್ಡಾಯವಾಗಿ ಲಿಫ್ಟ್ಗಳನ್ನು ಬಳಸಬೇಕು ಮತ್ತು ಅವರು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯುವಾಗ ಅವುಗಳ ಬಾಯಿಗೆ ಮಾಸ್ಕ್ ಹಾಕಬೇಕು ಎಂದು ಸೂಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಗಾಜಿಯಾಬಾದ್ ನಗರದ ವಿವಿಧ ಪ್ರದೇಶಗಳಲ್ಲಿ ಹಲವಾರು ನಾಯಿ ಕಚ್ಚಿದ ಘಟನೆಗಳು ಬೆಳಕಿಗೆ ಬಂದ ಬೆನ್ನಲ್ಲೇ ಈ ನಿರ್ಧಾರವು ಬಂದಿದೆ. ನಾಯಿಗಳನ್ನು ಸಾಕಿರುವ ಮಾಲೀಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಲಾಗಿದೆ.
“ಪಿಟ್ ಬುಲ್, ರೊಟ್ವೀಲರ್ ಮತ್ತು ಡೋಗೊ ಅರ್ಜೆಂಟಿನೋ ಈ ಮೂರು ತಳಿಗಳ ನಾಯಿಗಳನ್ನು ಸಾಕಲು ಯಾವುದೇ ಅನುಮತಿಯನ್ನು ನೀಡಲಾಗುವುದಿಲ್ಲ ಮತ್ತು ಯಾವುದೇ ಪರವಾನಗಿ ನೀಡಲಾಗುವುದಿಲ್ಲ. ಯಾರಾದರೂ ಈ ಸೂಚನೆ ಉಲ್ಲಂಘಿಸಿ ಈ ತಳಿಗಳನ್ನು ಸಾಕಿದರೆ ಅದರಿಂದ ಆಗುವ ಅನಾಹುತಗಳಿಗೆ ಅವರೇ ಜವಾಬ್ದಾರರಾಗುತ್ತಾರೆ. ಈ ಎಲ್ಲಾ ಮೂರು ತಳಿಗಳನ್ನು ಗಾಜಿಯಾಬಾದ್ನಲ್ಲಿ ನಿಷೇಧಿಸಲಾಗಿದೆ ಎಂದು ಬಿಜೆಪಿ ನಾಯಕ ಮತ್ತು ಜಿಎಂಸಿ ಕೌನ್ಸಿಲರ್ ಸಂಜಯ್ ಸಿಂಗ್ ಭಾನುವಾರ ಪಿಟಿಐಗೆ ತಿಳಿಸಿದರು.
BIG BREAKING NEWS: ಕೆರೆ ಕಟ್ಟೆಗಳ ನಿರ್ಮಾಣದ ಸರದಾರ ಎಂದೇ ಖ್ಯಾತರಾಗಿದ್ದ `ಕಲ್ಮನೆ ಕಾಮೇಗೌಡʼ ಇನ್ನಿಲ್ಲ
BIGG NEWS : ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಅರುಣ್ ಸಿಂಗ್ ಗುಡ್ ನ್ಯೂಸ್ : ಶೀಘ್ರವೇ ಸಚಿವ ಸಂಪುಟ ವಿಸ್ತರಣೆ