ಚಾಮರಾಜನಗರ : ರಾಷ್ಟ್ರೀಯ ಹೆದ್ದಾರಿ (National Highway) ಯಲ್ಲಿ ವ್ಯಕ್ತಿಗಳಿಬ್ಬರು ಮೀನು ಹಿಡಿದು,ಬಟ್ಟೆ ಒಗೆದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಸರ್ಕಾರದ ಅವ್ಯವಸ್ಥೆಯಿಂದ ಬೇಸತ್ತ ಗ್ರಾಮಸ್ಥರೊಬ್ಬರು ರಾಷ್ಟ್ರೀಯ ಹೆದ್ದಾರಿಯಲ್ಲೇ ಮೀನು ಹಿಡಿದು, ಬಟ್ಟೆ ಒಗೆದು ವ್ಯಂಗ್ಯವಾಡಿರುವ ವೀಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಕರ್ನಾಟಕ ತಮಿಳುನಾಡು ನಡುವಿನ ರಾಷ್ಟ್ರೀಯ ಹೆದ್ದಾರಿ ಚಾಮರಾಜನಗರ ತಾಲೂಕು ಕೋಳಿಪಾಳ್ಯದ ಬಳಿ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿದೆ. ಇದರಿಂದ ಅಪಘಾತಗಳು ನಡೆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದು ಇದರಿಂದ ಬೇಸತ್ತ ಕೋಳಿಪಾಳ್ಯ ನಿವಾಸಿಗಳು ನಿಂತ ನೀರಿನಲ್ಲಿ ಮೀನು ಹಿಡಿದು, ಬಟ್ಟೆ ಒಗೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
‘ದೇಶದ ಅಭಿವೃದ್ಧಿಯಲ್ಲಿ ತಾಂತ್ರಿಕ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ’ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
BIGG NEWS ; “ಗಾಂಧಿ ಕುಟುಂಬವನ್ನ ಸಂಪರ್ಕಿಸಲು ನಾಚಿಕೆ ಆಗೋದಿಲ್ಲ” ; ರಿಮೋಟ್ ಕಂಟ್ರೋಲ್ ಪ್ರಶ್ನೆಗೆ ‘ಖರ್ಗೆ’ ಉತ್ತರ