ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ, ಕೊಲೆಯ ಪ್ರಕರಣದ ಬಗ್ಗೆ ಸಿಎಂ ಬೊಮ್ಮಾಯಿ ( CM Bommai ) ಖೇಧ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
‘ಮೀನು ಪ್ರಿಯ’ ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್: ಶೀಘ್ರವೇ ‘ಬಿಬಿಎಂಪಿ ವಾರ್ಡ್’ಗಳಲ್ಲಿ ‘ಮೀನು ಆಹಾರ ಮಳಿಗೆ’ ಪ್ರಾರಂಭ
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ಕನ್ನಡ ಮತ್ತು ಸಂಸ್ಕೃತಿ ಮುಜರಾಯಿ ಮತ್ತು ಧಾರ್ಮಿಕ ದತ್ತಿ, ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾಡಳಿತ ಮಂಡ್ಯ ಜಿಲ್ಲೆ ಇವರುಗಳ ಸಹಯೋಗದೊಂದಿಗೆ ಸಂಗಮ, ಅಂಬಿಗರಹಳ್ಳಿ – ಸಂಗಾಪುರ – ಪುರದಲ್ಲಿ ಆಯೋಜಿಸಿರುವ ಮಲೆಮಹದೇಶ್ವರರ ಮಹಾಕುಂಭಾ ಮೇಳ 2022 ಮಹೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ ಮೀನುಗಾರರಿಗೆ ಸಿಎಂ ಬೊಮ್ಮಾಯಿ ದೀಪಾವಳಿ ಗಿಫ್ಟ್: ಸಹಾಯಧನ ಯೋಜನೆ 300 ಮೀನುಗಾರರಿಂದ 1000ಕ್ಕೆ ಹೆಚ್ಚಳ
ಸಂಸದೆ ಸುಮಲತಾ ಆದಿಯಾಗಿ ಮಳವಳ್ಳಿಯ ಘಟನೆಯ ಬಗ್ಗೆ ದಿಭ್ರಮೆಯನ್ನು ವ್ಯಕ್ತ ಪಡಿಸಿದ್ದಾರೆ. ಇದು ಸಮಾಜದಲ್ಲಿ ಎಂದೆಂದೂ ನಡೆಯಬಾರದು. ಇದೊಂದು ಅತ್ಯಂತ ಅಮಾನುಷ್ಯ ಕೃತ್ಯವಾಗಿದೆ. ಇದನ್ನು ಎಷ್ಟು ಕಠಿಣ ಶಬ್ದಗಳಲ್ಲಿ ಖಂಡಿಸೋದಕ್ಕೆ ಸಾಧ್ಯಾನೋ ಅಷ್ಟು ಹೇಳಿದರು ಅದು ಕಡಿಮೆಯೇ. ಏನೂ ಅರಿಯದ ಕಂದಮ್ಮನ ಪರಿಸ್ಥಿತಿ ನೋಡಿದ್ರೇ ಕರುಳು ಕಿತ್ತು ಬರುತ್ತದೆ ಎಂದರು.
‘ಚರ್ಮ ಗಂಟು ರೋಗ’ದ ಬಗ್ಗೆ ರೈತರಿಗೊಂಡು ಮಹತ್ವದ ಮಾಹಿತಿ: ಈ ‘ಮನೆಮದ್ದು ಚಿಕಿತ್ಸೆ’ ಮಾಡಿ | Lumpy Skin Disease
ಪೊಲೀಸ್ ಇಲಾಖೆಯಿಂದ ಸಮಗ್ರ ತನಿಖೆಯ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಎಲ್ಲಾ ಕೇಸ್ ಹಾಕಿದ್ದಾರೆ. ಈಗಾಗಲೇ ಪೊಲೀಸ್ ಮಹಾನಿರ್ದೇಶಕರಿಗೂ ನಾನು ಸೂಚನೆ ನೀಡಿದ್ದೇನೆ. ಎಫ್ಎಸ್ಎಲ್ ವರದಿ ಬಂದ ನಂತ್ರ ಚಾರ್ಜ್ ಶೀಟ್ ಹಾಕುವುದಾಗಿ ಹೇಳಿದ್ದಾರೆ. ಪ್ರಕರಣ ಸಂಬಂಧ ಆರೋಪಿಗೆ ಉಗ್ರ ಶಿಕ್ಷೆ ಆಗಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.