ಮಂಡ್ಯ : ಕರ್ನಾಟಕದಲ್ಲಿ ದುಡ್ಡಿದ್ದರೆ ಮಾತ್ರ ನೌಕರಿ ದೊರೆಯುತ್ತದೆ ಎಂದಿರುವ ರಾಹುಲ್ ಗಾಂಧಿಯವರಿಗೆ ಎಲ್ಲಾ ಪ್ರಕರಣಗಳ ಮಾಹಿತಿಯನ್ನು ಅಂಕಿಅಂಶಗಳ ಸಮೇತ ಕಳುಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯದ ಮೀನುಗಾರರಿಗೆ ಸಿಎಂ ಬೊಮ್ಮಾಯಿ ದೀಪಾವಳಿ ಗಿಫ್ಟ್: ಸಹಾಯಧನ ಯೋಜನೆ 300 ಮೀನುಗಾರರಿಂದ 1000ಕ್ಕೆ ಹೆಚ್ಚಳ
ಅವರು ಇಂದು ಕೆ.ಆರ್.ಪೇಟೆಯ ಅಂಬಿಗ್ರಾಮ ಹೆಲಿಪ್ಯಾಡ್ ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಗೆ ಬಹುತೇಕವಾಗಿ ಅವರಿಗೆ ಜಾಣ ಮೆರೆವಿರಬೇಕು. ಅಥವಾ ಕಾಂಗ್ರೆಸ್ ನವರು ಅವರಿಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ. ಅವರ ಕಾಲದಲ್ಲಿ ನೇಮಕಾತಿಯಲ್ಲಿ ಆದಷ್ಟು ಭ್ರಷ್ಟಾಚಾರ ಭಾರತ ದೇಶದಲ್ಲಿ ಎಲ್ಲೂ ಆಗಿಲ್ಲ. ಪೊಲೀಸ್ ಪೇದೆ, ಶಿಕ್ಷಕರು, ಪಿ.ಯು.ಸಿಯಲ್ಲಿ ಪ್ರಶೆಪತ್ರಿಕೆ ಸೋರಿಕೆಯಾಗಿರುವುದು ಎಲ್ಲಾ ವಿಚಾರದಲ್ಲಿ ಭ್ರಷ್ಟಾಚಾರವಾಗಿ ತನಿಖೆಯೂ ನಡೆಯುತ್ತಿದೆ. ಅವರಿಗೆ ಕಳುಹಿಸಲಾಗುತ್ತಿದೆ. ಅವರ ಆಡಳಿತದಲ್ಲಿ ಆಗಿರುವ ಭ್ರಷ್ಟಾಚಾರ ವನ್ನು ಕನ್ನಡಿಯಲ್ಲಿ ನೋಡಿಕೊಂಡು ಆಮೇಲೆ ಮಾತನಾಡಲಿ ಎಂದರು.
‘ಮೀನು ಪ್ರಿಯ’ ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್: ಶೀಘ್ರವೇ ‘ಬಿಬಿಎಂಪಿ ವಾರ್ಡ್’ಗಳಲ್ಲಿ ‘ಮೀನು ಆಹಾರ ಮಳಿಗೆ’ ಪ್ರಾರಂಭ
ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಳೆದ ಬಾರಿ ಅಧಿಕಾರಕ್ಕೆ 100 ಕ್ಕೆ 100 ಬರುವುದಾಗಿ ಹೇಳಿದರು. ಅವರು ಹೇಳಿದ್ದು ಯಾವುದು ನಿಜವಾಗಿದೆ ಎಂದರು. 127 ಸ್ಥಾನಗಳು 79ಕ್ಕೆ ಇಳಿಯಿತು. ಅಪ್ಪನಾಣೆ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋಲ್ಲ ಎಂದಿದ್ದರು. ಅವರಿಬ್ಬರೂ ಒಂದೇ ಅವಧಿಯಲ್ಲಿ ಮುಖ್ಯ ಮಂತ್ರಿಗಳಾದರು. ಅವರು ಎಷ್ಟು ಹೇಳುತ್ತಾರೋ ಅಷ್ಟು ನಮಗೆ ಒಳ್ಳೆಯದು ಎಂದರು.
‘ಚರ್ಮ ಗಂಟು ರೋಗ’ದ ಬಗ್ಗೆ ರೈತರಿಗೊಂಡು ಮಹತ್ವದ ಮಾಹಿತಿ: ಈ ‘ಮನೆಮದ್ದು ಚಿಕಿತ್ಸೆ’ ಮಾಡಿ | Lumpy Skin Disease