ಮಿಜೋರಾಂ: ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಪ್ರಾಣಿಗಳ ದೊಡ್ಡ ಸಾಗಾಟದಲ್ಲಿ, ಅಲ್ಬಿನೋ ವಾಲಾಬಿ ಸೇರಿದಂತೆ 140 ವಿಲಕ್ಷಣ ವನ್ಯಜೀವಿ ಪ್ರಭೇದಗಳನ್ನು ಶನಿವಾರ ಮಿಜೋರಾಂನಲ್ಲಿ ರಕ್ಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
‘ಮಲ್ಲಿಕಾರ್ಜುನ ಖರ್ಗೆ ಸರ್ ನನ್ನ ನಾಯಕರು, ನಾವು ಶತ್ರುಗಳಲ್ಲ’: ಶಶಿ ತರೂರ್ | Shashi Tharoor On Congress Poll
ಪೊಲೀಸ್ ಮೂಲಗಳ ಪ್ರಕಾರ, ವಿದೇಶಿ ಪ್ರಾಣಿಗಳನ್ನು ನೆರೆಯ ಮ್ಯಾನ್ಮಾರ್ನಿಂದ ಕಳ್ಳಸಾಗಣೆ ಮಾಡಲಾಗಿದ್ದು, ಎರಡೂ ದೇಶಗಳ ಕಳ್ಳಸಾಗಣೆದಾರರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.
Mizoram | In a joint operation Champhai police of Mizoram & Champhai Excise & Narcotics Dept rescued & seized 140 exotic animals & birds, suspected to be smuggled from Myanmar were handed over to Superintendent, Custom Preventive Force, Champhai for further action: Mizoram police pic.twitter.com/T2JUS1N54R
— ANI (@ANI) October 15, 2022
ಚಂಫೈ ಪೊಲೀಸರು ಮತ್ತು ಅಬಕಾರಿ ಮತ್ತು ಮಾದಕ ದ್ರವ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ದರು. ವಾಹನಗಳಲ್ಲಿ ವಿದೇಶಿ ಪ್ರಾಣಿಗಳಲ್ಲಿ 30 ಆಮೆಗಳು, ಎರಡು ಕೋತಿಗಳು, ಎರಡು ಮರ್ಮೊಸೆಟ್ ಮಂಗಗಳು, 22 ಹೆಬ್ಬಾವುಗಳು, 18 ಸುಮಾತ್ರಾನ್ ವಾಟರ್ ಮಾನಿಟರ್ಗಳು, 55 ಮೊಸಳೆ ಮರಿಗಳು, ನಾಲ್ಕು ಜ್ವಾಲೆಯ ಬೋವರ್ಬರ್ಡ್ಗಳು, ನಾಲ್ಕು ಸರ್ವಲ್ ಬೆಕ್ಕುಗಳು ಮತ್ತು ಒಂದು ಅಲ್ಬಿನೋ ವಾಲಾಬಿ ಸೇರಿವೆ.
ವಿದೇಶಿ ಪ್ರಾಣಿಗಳು, ಪಕ್ಷಿಗಳು ಮತ್ತು ವಾಹನಗಳು ಮತ್ತು ಮೂವರು ಕಳ್ಳಸಾಗಾಣಿಕೆದಾರರನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಅಧೀಕ್ಷಕರು, ಕಸ್ಟಮ್ ಪ್ರಿವೆಂಟಿವ್ ಫೋರ್ಸ್, ಚಂಫೈ ಅವರಿಗೆ ಹಸ್ತಾರಿಸಿದ್ದಾರೆ ಎನ್ನಲಾಗುತ್ತಿದೆ.
ಕಳೆದ ತಿಂಗಳು, ಅಸ್ಸಾಂನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಲಾಗಿತ್ತು. ಆಗ 40 ಪ್ರಾಣಿಗಳನ್ನು ರಕ್ಷಿಸಲಾಗಿತ್ತು. ಈ ಪ್ರಾಣಿಗಳನ್ನು ಮ್ಯಾನ್ಮಾರ್ನಿಂದ ಸಾಗಿಸಲಾಗುತ್ತಿತ್ತು ಮತ್ತು ವಾಹನಗಳು ನಾಗಾಲ್ಯಾಂಡ್ನ ದಿಮಾಪುರದಿಂದ ಅಕ್ರಮವಾಗಿ ಸಾಗಿಸುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನವೆಂಬರ್ ನಲ್ಲಿ ಮೈಸೂರಿನಿಂದ ಬೆಂಗಳೂರಿನಿಂದ ಚೆನ್ನೈಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ