ಶಿವಮೊಗ್ಗ : ಮಂಡ್ಲಿ ವಿ ವಿ ಕೇಂದ್ರದ ಊರಗಡೂರು ಫೀಡರ್ 7 ರಲ್ಲಿ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ದಿ: 18/10/2022 ಮತ್ತು ದಿ: 19/10/2022 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ನಿಂಗಪ್ಪ ಲೇಔಟ್, ಸೂಳೆಬೈಲು, ಊರಗಡೂರು, ವಾದಿ ಎ ಹುದ್, ಮಳಲಿಕೊಪ್ಪ, ಇಂದಿರಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
BIGG NEWS: ‘ಮುರುಘಾಶ್ರೀ’ಗಳ ಪೀಠತ್ಯಾಗಕ್ಕೆ ಹೆಚ್ಚಿದ ಒತ್ತಡ: ಯಾರಾಗ್ತಾರೆ ‘ಹೊಸ ಪೀಠಾಧಿಪತಿ’.? ಇಲ್ಲಿದೆ ಪಟ್ಟಿ
ಜಿಲ್ಲಾ ಮಟ್ಟದ ರಾಷ್ಟ್ರೀಯ ಶಿಶಿಕ್ಷು ಮೇಳ
ಶಿವಮೊಗ್ಗ ತಾ. ಗಾಜನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಯು ದಿ: 17/10/2022 ರಂದು ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಶಿಶಿಕ್ಷು ಮೇಳವನ್ನು ಆಯೋಜಿಸಿದೆ.
ಮುರುಘಾ ಮಠಕ್ಕೆ ಕಾನೂನು ಪ್ರಕಾರ ನೂತನ ಪೀಠಾಧಿಪತಿ : ಸಿಎಂ ಬಸವರಾಜ ಬೊಮ್ಮಾಯಿ
ಈ ಮೇಳದಲ್ಲಿ ಜಿಲ್ಲೆಯ 9 ಸರ್ಕಾರಿ, 6 ಅನುದಾನಿತ ಹಾಗೂ 29 ಖಾಸಗಿ ಐಟಿಐಗಳಲ್ಲಿ ಉತ್ತೀರ್ಣರಾದ ಮತ್ತು ಅಂತಿಮ ವರ್ಷದ ತರಬೇತಿ ಪಡೆಯುತ್ತಿರುವವರು ಆನ್ಲೈನ್ ನೋಂದಣಿ ಮಾಡಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯ ಅಪ್ರೆಂಟೀಶ್ಶಿಪ್ಗೆ ನೊಂದಾಯಿತ ಎಲ್ಲಾ ಕಂಪೆನಿಯಗಳು ಶಿಶಿಕ್ಷು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿವೆ. ನೇಮಕಾತಿ ಹೊಂದಿರುವವರಿಗೆ ಸ್ಥಳದಲ್ಲಿ ನೇಮಕಾತಿ ಪತ್ರನವನು ನೀಡಲಿದ್ದಾರೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.