ಬೆಂಗಳೂರು: ಇಂದಿರಾ ಗಾಂಧಿ ( Indira Gandhi ) ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದಾಗ ಅವರ ಗೆಲುವಿನಲ್ಲಿ ಮತ್ತೊಬ್ಬ ಮಹಿಳೆ ಮೋಟಮ್ಮ ಮಹತ್ತರ ಪಾತ್ರ ವಹಿಸಿದ್ದರು. ಅದೇ ಮೋಟಮ್ಮ ಅವರನ್ನು ನಂತರದ ದಿನಗಳಲ್ಲಿ ಸಿದ್ಧರಾಮಯ್ಯ ( Siddaramaiah ) ಮತ್ತು ಕಾಂಗ್ರೆಸ್ ನಾಯಕರು ( Congress Leader ) ನಿಕೃಷ್ಟವಾಗಿ ನಡೆಸಿಕೊಂಡರು. ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ ಎಂಬುದಾಗಿ ಬಿಜೆಪಿ ಕರ್ನಾಟಕ ( BJP Karnataka ) ವಾಗ್ಧಾಳಿ ನಡೆಸಿದೆ.
ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದಾಗ ಅವರ ಗೆಲುವಿನಲ್ಲಿ ಮತ್ತೊಬ್ಬ ಮಹಿಳೆ ಮೋಟಮ್ಮ ಮಹತ್ತರ ಪಾತ್ರ ವಹಿಸಿದ್ದರು.
ಅದೇ ಮೋಟಮ್ಮ ಅವರನ್ನು ನಂತರದ ದಿನಗಳಲ್ಲಿ @siddaramaiah ಮತ್ತು @INCKarnataka ನಾಯಕರು ನಿಕೃಷ್ಟವಾಗಿ ನಡೆಸಿಕೊಂಡರು.
ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ.#BharatTodoYatra
— BJP Karnataka (@BJP4Karnataka) October 15, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ನಾಯಕ, ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅತ್ಯಂತ ಅಮಾನವೀಯವಾಗಿ ರಾಜೀವ್ ಗಾಂಧಿ ಪದಚ್ಯುತಗೊಳಿಸಿದ್ದರು. ರಾಹುಲ್ ಗಾಂಧಿ ಅವರೇ, ತಮ್ಮದೇ ಪಕ್ಷದ ವೀರಶೈವ ಲಿಂಗಾಯತ ನಾಯಕನೊಬ್ಬನನ್ನು ರಾಜಕೀಯವಾಗಿ ತುಳಿದ ಘಟನೆಯನ್ನು ಕರ್ನಾಟಕ ಬಿಡುವ ಮುನ್ನ ಒಮ್ಮೆ ನೆನಪಿಸಿಕೊಳ್ಳಿ ಎಂದು ಹೇಳಿದೆ.
ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ನಾಯಕ, ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅತ್ಯಂತ ಅಮಾನವೀಯವಾಗಿ ರಾಜೀವ್ ಗಾಂಧಿ ಪದಚ್ಯುತಗೊಳಿಸಿದ್ದರು.
ರಾಹುಲ್ ಗಾಂಧಿ ಅವರೇ, ತಮ್ಮದೇ ಪಕ್ಷದ ವೀರಶೈವ ಲಿಂಗಾಯತ ನಾಯಕನೊಬ್ಬನನ್ನು ರಾಜಕೀಯವಾಗಿ ತುಳಿದ ಘಟನೆಯನ್ನು ಕರ್ನಾಟಕ ಬಿಡುವ ಮುನ್ನ ಒಮ್ಮೆ ನೆನಪಿಸಿಕೊಳ್ಳಿ.#BharatTodoYatra
— BJP Karnataka (@BJP4Karnataka) October 15, 2022
ರಾಹುಲ್ ಅವರು ನೆನಪಿಡಲೇ ಬೇಕಾದ ರಾಜ್ಯದ ಕೆಲವೊಂದಷ್ಟು ಸಂಗತಿಗಳಿವೆ. ಅಮೇಥಿ ಸೋಲಿನ ಭಯದಿಂದ ಸೋನಿಯಾ ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಆದರೆ, ಗೆದ್ದ ಬಳಿಕ ಅದೇ ಕ್ಷೇತ್ರವನ್ನು ಎಡಗಾಲಿನಲ್ಲಿ ಒದ್ದು ರಾಜಿನಾಮೆ ನೀಡಿ, ಅಮೇಥಿಗೆ ಓಡಿ ಹೋದರು. ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ ಎಂದು ಹೇಳಿದೆ.
ರಾಹುಲ್ ಅವರು ನೆನಪಿಡಲೇ ಬೇಕಾದ ರಾಜ್ಯದ ಕೆಲವೊಂದಷ್ಟು ಸಂಗತಿಗಳಿವೆ.
ಅಮೇಥಿ ಸೋಲಿನ ಭಯದಿಂದ ಸೋನಿಯಾ ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದರು.
ಆದರೆ, ಗೆದ್ದ ಬಳಿಕ ಅದೇ ಕ್ಷೇತ್ರವನ್ನು ಎಡಗಾಲಿನಲ್ಲಿ ಒದ್ದು ರಾಜಿನಾಮೆ ನೀಡಿ, ಅಮೇಥಿಗೆ ಓಡಿ ಹೋದರು.
ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ.#BharatTodoYatra
— BJP Karnataka (@BJP4Karnataka) October 15, 2022
ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ ರಾಹುಲ್ ಗಾಂಧಿ ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ. ಡಿಸೇಲ್ ದರ/ಲೀ. ಆಂಧ್ರಪ್ರದೇಶ – 99.15 ತೆಲಂಗಾಣ – 97.82 ರಾಜಸ್ಥಾನ – 93.72 ಕರ್ನಾಟಕ – 87.94 ಬಿಜೆಪಿಯೇತರ ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ತಾಗಬಹುದು ಎಂದು ತಿಳಿಸಿದೆ.
ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ @RahulGandhi ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ.
ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ.
ಡಿಸೇಲ್ ದರ/ಲೀ.
ಆಂಧ್ರಪ್ರದೇಶ – 99.15
ತೆಲಂಗಾಣ – 97.82
ರಾಜಸ್ಥಾನ – 93.72
ಕರ್ನಾಟಕ – 87.94ಬಿಜೆಪಿಯೇತರ ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ತಾಗಬಹುದು!#BharatTodoYatra
— BJP Karnataka (@BJP4Karnataka) October 15, 2022