ಬೆಂಗಳೂರು: ನಗರದಲ್ಲಿ ವೃದ್ಧರನ್ನು ಟಾರ್ಗೆಟ್ ಮಾಡಿ ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡು ಹಣ ಬಾಚಿಕೊಳ್ಳುತ್ತಿದ್ದ ಖತರ್ನಾಕ್ ಖದೀಮರನ್ನ ಪೊಲೀಸರು ಬಂಧಿಸಿದ್ದಾರೆ.
BIGG NEWS: ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ʼಕೈʼ ನಾಯಕನಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
ರೀತುಶ್ರೀ ಅಲಿಯಾಸ್ ಸುಶ್ಮಿತಾ ರಾಜ್ ಹಾಗೂ ಸಂತೋಷ್ ಬಂಧಿತ ಆರೋಪಿಗಳು. ನಕಲಿ ಫೇಸ್ ಬುಕ್ ಖಾತೆ ತೆರೆದು ಮುಖಪುಟಗಳಿಗೆ ಬೇರೆ ಬೇರೆ ಫೋಟೋಗಳನ್ನು ಎಡಿಟ್ ಮಾಡಿ ವೃದ್ಧವರನ್ನ ಟಾರ್ಗೆಟ್ ಮಾಡುತ್ತಿದ್ದರು.
ಹೀಗೆ ಆಕೆ ನನ್ನ ಗಂಡ ವಿದೇಶದಲ್ಲಿದ್ದಾನೆ. ನನ್ನನ್ನು ಬಿಟ್ಟು ಎರಡು ವರ್ಷವಾಗಿದೆ. ಕೆಲಸವೂ ಇಲ್ಲ . ನನಗೆ ಚಿಕ್ಕ ಮಗುವಿದೆ. ಹೀಗಾಗಿ ಜೀವನ ನಡೆಸುವುದು ಕಷ್ಟವಾಗಿದೆ. ನಾನು ವಿಚ್ಛೇಧನಕ್ಕಾಗಿ ಅರ್ಜಿ ಹಾಕಿದ್ದು, ಸದ್ಯದಲ್ಲೇ ನನಗೆ ಹಣ ಸಿಗುತ್ತದೆ. ಅವಾಗ ಹಣ ವಾಪಸ್ ಕೊಡುತ್ತೇನೆ ಸ್ವಲ್ಪ ಹಣ ಕೊಡಿ ಎಂದು ಕೇಳುತ್ತಿದ್ದಳು.
ಹೀಗೆ ಹೇಳಿ ಚೌಡಪ್ಪ ಎಂಬುವರಿಂದ ಹಣ ದೋಚಿ ಪರಾರಿಯಾಗಿದ್ದಾಳೆ. ಈ ಬಗ್ಗೆ ಚೌಡಪ್ಪ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.