ಅಸ್ತಾನಾ: ರಷ್ಯಾದ ಸೇನೆಯೊಂದಿಗಿನ ನ್ಯಾಟೋ ಪಡೆಗಳ ಯಾವುದೇ ನೇರ ಸಂಪರ್ಕ ಅಥವಾ ನೇರ ಘರ್ಷಣೆಯು “ಜಾಗತಿಕ ದುರಂತ”ಕ್ಕೆ ಕಾರಣವಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಹೇಳಿದ್ದಾರೆ.
ಕಝಾಕಿಸ್ತಾನದ ರಾಜಧಾನಿ ಅಸ್ತಾನಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, “ಯಾವುದಾದರೂ ಸಂದರ್ಭದಲ್ಲಿ ರಷ್ಯಾದ ಸೈನ್ಯದೊಂದಿಗೆ ನ್ಯಾಟೋ (NATO)ಪಡೆಗಳು ನೇರ ಘರ್ಷಣೆಗೆ ಮುಂದಾದ್ರೆ, ಅದು ಜಾಗತಿಕ ದುರಂತಕ್ಕೆ ಕಾರಣವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಅಂತಹ ಹೆಜ್ಜೆಯನ್ನು ತೆಗೆದುಕೊಳ್ಳದಿರುವಷ್ಟು ಅವರು ಬುದ್ಧಿವಂತರಿದ್ದಾರೆ ಅಂದುಕೊಳ್ಳುತ್ತೇನೆ ಎಂದು ಪುಟೀನ್ ಹೇಳಿದ್ದಾರೆ.”
ಕಳೆದ ತಿಂಗಳು ಉಕ್ರೇನ್ನ ನಾಲ್ಕು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ನಂತರ ರಷ್ಯಾದ ಪ್ರದೇಶವನ್ನು ರಕ್ಷಿಸಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಪುಟಿನ್ ಎಚ್ಚರಿಕೆ ನೀಡಿದ್ದರು, ಈ ಕ್ರಮವನ್ನು ಯುಎನ್ ಈ ವಾರ ಖಂಡಿಸಿದೆ.
BIG NEWS: ಉಕ್ರೇನ್ಗೆ 5,975 ಕೋಟಿ ರೂ. ಮೌಲ್ಯದ ಮಿಲಿಟರಿ ನೆರವು ಘೋಷಿಸಿದ ಯುಎಸ್
BIG NEWS: ಮುಂಬೈ ಎಸ್ಬಿಐ ಬ್ಯಾಂಕ್ ಸ್ಫೋಟಿಸುವ ಬೆದರಿಕೆ ಹಾಕಿದ ಪಾಕ್ ವ್ಯಕ್ತಿ: ಪೊಲೀಸರಿಂದ ಚುರುಕುಗೊಂಡ ತನಿಖೆ
BIGG NEWS : ಪರಿಶಿಷ್ಟರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ `ವೇದ ಗಣಿತ’ ತರಬೇತಿ : ಆದೇಶ ಪತ್ರ ಹಿಂಪಡೆದ ರಾಜ್ಯ ಸರ್ಕಾರ