ಉತ್ತರ ಪ್ರದೇಶ; ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ತರಬೇತಿ ವೇಳೆ ಹೆಡ್ ಕಾನ್ಸ್ಟೆಬಲ್ ಒಬ್ಬರು ಮಲಗಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳು ಕೇಳಿದ್ದರು. ಇದಕ್ಕೆ ಸ್ಪಷ್ಟೀಕರಣ ಕೊಟ್ಟ ಪತ್ರದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾನ್ಸ್ಟೆಬಲ್ ರಾಮ್ ಶರೀಫ್ ಯಾದವ್ ಸೋಮವಾರ ತಮ್ಮ ತರಬೇತಿ ಅವಧಿಯಲ್ಲಿ ಮಲಗಿದ್ದರು. ಇದನ್ನು ಕಂಡ ಅವರ ಕಮಾಂಡರ್ ಈ ಕೃತ್ಯವು ಸಂಪೂರ್ಣ ನಿರ್ಲಕ್ಷ್ಯದ ಸಂಕೇತವಾಗಿದೆ. ಇದಕ್ಕೆ ಸ್ಪಷ್ಟೀಕರಣವನ್ನು ನೀಡಬೇಕೆಂದು ತಾಕೀತು ಮಾಡಿದ್ದರು.
ಇದಕ್ಕೆ ಉತ್ತರ ಕೊಟ್ಟ ಕಾನ್ಸ್ಟೆಬಲ್, “ನಾನು ಲಕ್ನೋದಿಂದ ಪಿಟಿಸಿ ದದುಪುರಕ್ಕೆ ತರಬೇತಿಗಾಗಿ ಹೊರಟೆ. ನಾನು ಇಲ್ಲಿಗೆ ಬರಲು ತುಂಬಾ ತೊಂದರೆ ಅನುಭವಿಸಿದೆ. ಸರಿಯಾಗಿ ಆಹಾರ ಸಿಗದ ಕಾರಣ ನನ್ನ ಹೊಟ್ಟೆ ತುಂಬಲಿಲ್ಲ. ಆದ್ದರಿಂದ ಮರುದಿನ ಬೆಳಿಗ್ಗೆ ನಾನು 25 ರೊಟ್ಟಿಗಳು, ಒಂದು ತಟ್ಟೆ ಅನ್ನ, ಎರಡು ಬಟ್ಟಲು ದಾಲ್ ಮತ್ತು ಒಂದು ಬಟ್ಟಲು ತರಕಾರಿಯನ್ನು ತಿಂದೆ. ಇದು ನನಗೆ ಆಲಸ್ಯ ಮತ್ತು ನಿದ್ದೆ ಬರುವಂತೆ ಮಾಡಿತು” ಎಂದು ಪತ್ರದಲ್ಲಿ ಬರೆದಿದ್ದಾರೆ.
सुल्तानपुर में ट्रेनिंग क्लास में सोते हुए पकड़े गए सिपाही से जब स्पष्टीकरण मांगा गया
तो जवाब गजब का था 😆😆😆 pic.twitter.com/qk0kdPOOH9— Varun SR Goyal (@varunmaddy) October 11, 2022
ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ಯಾದವ್ ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಹಿರಿಯ ಅಧಿಕಾರಿಗೆ ಭರವಸೆ ನೀಡಿದರು. ಈ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
BIG NEWS: ಉತ್ತರ ಕೆರೊಲಿನಾದಲ್ಲಿ ಗುಂಡಿನ ದಾಳಿ: ಪೊಲೀಸ್ ಅಧಿಕಾರಿ ಸೇರಿ ಐದು ಮಂದಿ ಸಾವು, ಆರೋಪಿ ಅರೆಸ್ಟ್
BIGG NEWS: ಕಲಬುರಗಿಯಲ್ಲಿ ಸುರಿದ ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ನದಿ, ಹಳ್ಳಗಳು; ರಸ್ತೆ ಸಂಪರ್ಕ ಕಡಿತ