ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಯುಜಿಸಿ (UGC), ಐಸಿಎಆರ್, ಎಐಸಿಟಿಇ ವೇತನ ಶ್ರೇಣಿಯ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳ ತುಟ್ಟಿಭತ್ಯೆಯನ್ನು ಶೇ.34ರಿಂದ ಶೇ.38ಕ್ಕೆ ಹೆಚ್ಚಿಸಿ ( DA Hike ) ಅಧಿಕೃತ ಆದೇಶವನ್ನು ಹೊರಡಿಸಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2016ರ ಪರಿಷ್ಕೃತ ಯುಜಿಸಿ, ಐಸಿಎಆರ್, ಎಐಸಿಟಿಇ ವೇತನ ಶ್ರೇಣಿಗಳಲ್ಲಿನ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳ ತುಟ್ಟಿಭತ್ಯೆಯ ದರಗಳನ್ನು ( Dearness Allowance – DA Hike ), ಪ್ರಸ್ತುತ ಮೂಲ ವೇತನದ ಶೇಕಡ 34 ರಿಂದ ಶೇಕಡ 38ಕ್ಕೆ ಜುಲೈ 1, 2022ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ ಎಂದಿದ್ದಾರೆ.
ಇನ್ನೂ ಈ ಆದೇಶದ ಉದ್ದೇಶಗಳಿಗಾಗಿ ಮೂಲ ವೇತನ ಎಂದರು ಸರ್ಕಾರಿ ನೌಕರನು ಧಾರಣೆ ಮಾಡಿರುವ ಹುದ್ದೆಗೆ ಅನ್ವಯವಾಗುವ 2016ರ ಪರಿಷ್ಕೃತ ಯುಜಿಸಿ, ಐಸಿಎಆರ್, ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಪಡೆಯುತ್ತಿರುವ ವೇತನ ಎಂದು ತಿಳಿಸಿದ್ದಾರೆ.
‘ಹಿಜಾಬ್’ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತಿರ್ಪಿನ ಬಗ್ಗೆ ‘ಸಿಎಂ ಬೊಮ್ಮಾಯಿ’ ಹೇಳಿದ್ದೇನು ಗೊತ್ತಾ.? | Hijab Row
ಯುಜಿಸಿ, ಐಸಿಎಆರ್, ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು, ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಪೂರ್ಣಕಾಲಿಕ ನೌಕರರಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.