ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಶಿಕ್ಷಕರ ವರ್ಗಾವಣೆ ( Teacher Transfer ) ನಿಯಂತ್ರಣ ತಿದ್ದುಪಡಿ ವಿಧೇಯಕವನ್ನು ಪರಿಷ್ಕರಣೆಗೊಳಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಪ್ರಕಟಿತ ವಿಶೇಷ ರಾಜ್ಯಪತ್ರದಲ್ಲಿ ಶಿಕ್ಷಕರ ವರ್ಗಾವಣೆ ಸಂಬಂಧ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ( ತಿದ್ದುಪಡಿ) ಅಧಿನಿಯಮ 2022ರಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರನ್ನು ಅಥವಾ ಉಪನ್ಯಾಸಕರನ್ನು ( Teacher and Lecturer ) ಮರು ನಿಯೋಜನೆ ಮಾಡಲಾಗಿದ್ದಲ್ಲಿ ಅಲ್ಲಿಂದ ಶಾಲೆಯ ( School ) ಅಥವಾ ಪದವಿ ಪೂರ್ವ ಕಾಲೇಜಿನಲ್ಲಿ ( Pre-University College – PU College ) ) ಸಲ್ಲಿಸಿದ ಸೇವೆಯನ್ನು ಒಳಗೊಂಡಂತೆ ಶಾಲೆ ಅಥವಾ ಪದವಿ ಪೂರ್ವ ಕಾಲೇಜುಗಳಲ್ಲಿ ಸಲ್ಲಿಸಿದ ನಿರಂತರ ಮೂರು ವರ್ಷಗಳ ಸೇವೆ ಪರಿಗಣಿಸಲಾಗುತ್ತಿದೆ.
ಇನ್ನೂ ಮಾನದಂಡದ ಅನುಸಾರವಾಗಿ ಶಿಕ್ಷಕನು ಪಡೆದ ಕೃಪಾಂಕವನ್ನು ಆಧರಿಸಿ, ಶಿಕ್ಷಕರ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸುವುದು. ನಿರ್ದಿಷ್ಟಪಡಿಸಿದ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗನುಸಾರವಾಗಿ ಸಿದ್ಧಪಡಿಸಿದ ಮೆರಿಟ್ ಪಟ್ಟಿ ತಯಾರಿಸುವುದು.
ಜೇಷ್ಠತಾ ಘಟಕದ ಒಳಗಿನ ಅಥವಾ ಹೊರಗಿನ ಸ್ಥಳಕ್ಕೆ ಮಾಡಲಾಗುವ ಪರಸ್ಪರ ವರ್ಗಾವಣೆಯು ಇಬ್ಬರು ಶಿಕ್ಷಕರು ಆ ವೃಂದದಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕೆಂಬ, ಆ ವಲಯದ ವರ್ಗಾವಣೆಗೆ ಅನ್ಯಥಾ ಅರ್ಹರಾಗಿರಬೇಕೆಂಬ ಮತ್ತು ಕನಿಷ್ಠ ಐದು ವರ್ಷಗಳ ಸೇವೆ ಉಳಿದಿರಬೇಕೆಂಬ ಷರತ್ತುಗಳಿಗೆ ಒಳಪಟ್ಟಿರತಕ್ಕದ್ದು.
ಪದವಿ ಪೂರ್ವ ಕಾಲೇಜು ಅಥವಾ ಸಂಯುಕ್ತ ಜೂನಿಯರ್ ಕಾಲೇಜಿನ ಉಪನ್ಯಾಸಕರ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಅಥವಾ ಸಂಯುಕ್ತ ಜೂನಿಯರ್ ಕಾಲೇಜಿನ ಉಪನ್ಯಾಸಕರು ( PU College Lecturer ) ಕನಿಷ್ಠ 7 ವರ್ಷಗಳ ಸೇವೆಯನ್ನು ಪೂರೈಸಿರತಕ್ಕದ್ದು ಎಂದಿದೆ.
ಇನ್ನೂ ತಾಲೂಕಿನೊಳಗಿನ ವರ್ಗಾವಣೆ ಮತ್ತು ಒಂದೇ ವೃಂದ ಹಾಗೂ ತಾಲೂಕಿನಲ್ಲಿ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಶಿಕ್ಷಕರಿಗೆ ಅಥವಾ ಒಂದೇ ಕ್ಷೇತ್ರದಲ್ಲಿ ಒಟ್ಟು 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಶಿಕ್ಷಕರ ವರ್ಗಾವಣೆಯನ್ನು ಹೊರತುಪಡಿಸಿ ಶೇ.25ಕ್ಕಿಂತ ಹೆಚ್ಚಿಗೆ ಖಾಲಿ ಸ್ಥಾನಗಳಿರುವ ಕ್ಷೇತ್ರಗಳಿಂದ ವರ್ಗಾವಣೆಗೆ ಅನುಮತಿಸುವಂತಿಲ್ಲ ಎಂದಿದೆ.
ವರದಿ: ವಸಂತ ಬಿ ಈಶ್ವರಗೆರೆ
‘ಹಿಜಾಬ್’ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತಿರ್ಪಿನ ಬಗ್ಗೆ ‘ಸಿಎಂ ಬೊಮ್ಮಾಯಿ’ ಹೇಳಿದ್ದೇನು ಗೊತ್ತಾ.? | Hijab Row
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ, 2022ರ ಸಂಪೂರ್ಣ ಮಾಹಿತಿ ಈ ಕೆಳಗಿದೆ ಓದಿ