ಪಾಕಿಸ್ತಾನ: ಪಾಕಿಸ್ತಾನದಲ್ಲಿ ಬಸ್ವೊಂದಕ್ಕೆ ಬೆಂಕಿಹೊತ್ತಿಕೊಂಡಿದ್ದು, ಅಪಘಾತದಲ್ಲಿ 12 ಮಕ್ಕಳು ಸೇರಿದಂತೆ 21 ಮಂದಿ ಸಜೀವ ದಹನವಾಗಿರುವ ಘಟನೆ ನಿನ್ನೆ ಮಧ್ಯರಾತ್ರಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಮ್ಶೋರೊ ಜಿಲ್ಲೆಯ ನೂರಿಯಾಬಾದ್ ಬಳಿಯ ಎಂ9 ಮೋಟರ್ವೇಯಲ್ಲಿ ನಡೆದಿದೆ.
ಘಟನೆಯ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ, ರಸ್ತೆಯಲ್ಲಿ ನಿಂತಿರುವ ಬಸ್ಗೆ ಬೆಂಕಿಹೊತ್ತಿಕೊಂಡಿದ್ದು, ಧಗಧಗಿಸುತ್ತಿರುವುದನ್ನು ನೋಡಬಹುದು.
Reports coming in of a bus having caught fire near Nooriabad on the M9 Motorway – prayers for the safety and well being of all on board.#Sindh#Pakistan pic.twitter.com/8CmHjL1amw
— Yusra Askari (@YusraSAskari) October 12, 2022
BREAKING: At least 16 people including minors burnt alive after a bus carrying Pakistan flood victims from Karachi caught fire at super highway near Nooriabad: officials pic.twitter.com/0Y152aG4os
— Insider Paper (@TheInsiderPaper) October 12, 2022
ಮೃತರೆಲ್ಲರೂ ಪ್ರವಾಹ ಸಂತ್ರಸ್ತರಾಗಿದ್ದು, ಕರಾಚಿಯಿಂದ ತಮ್ಮ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಅಧಿಕಾರಿಗಳು ನೀಡಿದ ವಿವರಗಳ ಪ್ರಕಾರ, ಆಗಸ್ಟ್ನಲ್ಲಿ ಪಾಕಿಸ್ತಾನದಲ್ಲಿ ತೀವ್ರ ಪ್ರವಾಹ ಉಂಟಾಗಿತ್ತು. ಈ ವೇಳೆ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ಕರಾಚಿಯ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಈಗ ಇಲ್ಲಿನ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಹೀಗಾಗಿ, ಸಿಂಧ್ ಪ್ರಾಂತ್ಯದ 45 ಜನರು ಎಸಿ ಬಸ್ನಲ್ಲಿ ತಮ್ಮ ಹಳ್ಳಿಗಳಿಗೆ ಹೊರಟರು. ಬಸ್ ರಸ್ತೆಯಲ್ಲಿ ಸಾಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಬಸ್ ಸುಟ್ಟು ಬೂದಿಯಾಗಿದೆ. ನಿವಾಸಿಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಕಿಟಕಿಗಳು ಮುಚ್ಚಿದ್ದರಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಬೆಂಕಿಯಿಂದ ಕೆಲವರು ಸುಟ್ಟು ಕರಕಲಾದರೆ, ಇನ್ನು ಕೆಲವರು ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.
BIGG NEWS: ಸುಪ್ರೀಂಕೋರ್ಟ್ ಯಾವುದೇ ತೀರ್ಪು ಬಂದರೂ ನಾವು ಗೌರವಿಸುತ್ತೇವೆ; ಆರಗ ಜ್ಞಾನೇಂದ್ರ ಸ್ಪಷ್ಟನೆ
BIGG NEWS : ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿಲುವು ಬದಲಾವಣೆ ಇಲ್ಲ : ಕಂದಾಯ ಸಚಿವ ಆರ್. ಅಶೋಕ್