ರಷ್ಯಾ : ರಷ್ಯಾದಿಂದ ಯುರೋಪ್ ಗೆ ಅನಿಲ ಪೂರೈಕೆ ಪುನಾರಂಭಿಸಲು ಸಿದ್ದವಾಗಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಬಾಲ್ಟಿಕ್ ಸಮುದ್ರದ ಅಡಿಯಲ್ಲಿ ಜರ್ಮನಿಗೆ ಹೋಗುವ ನಾರ್ಡ್ ಸ್ಟ್ರೀಮ್ 2 ಪೈಪ್ ಲೈನ್ ಮೂಲಕ ಯುರೋಪ್ ಗೆ ಅನಿಲ ಪೂರೈಕೆಯನ್ನು ಪುನರಾರಂಭಿಸಲು ಮಾಸ್ಕೋ ಸಿದ್ಧವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ರಷ್ಯಾ ಅನಿಲ ಪೂರೈಕೆಯನ್ನು ಗಮನಾರ್ಹವಾಗಿ ಕಡಿತಗೊಳಿಸಿತ್ತುಲ. ಉಕ್ರೇನ್ ಮೇಲಿನ ದಾಳಿಗೂ ಮೊದಲೇ ರಷ್ಯಾ ಕಡಿಮೆ ಅವಧಿಯ ಸ್ಪಾಟ್ ಮಾರುಕಟ್ಟೆಗೆ ಅನಿಲ ಪೂರೈಸುತ್ತಿರಲಿಲ್ಲ. ಆದರೆ ಯುರೋಪಿಯನ್ ಒಕ್ಕೂಟ ರಷ್ಯಾದ ಬ್ಯಾಂಕುಗಳು ಮತ್ತು ಕಂಪನಿಗಳ ಮೇಲೆ ನಿರ್ಬಂಧ ಹೇರಿ, ಉಕ್ರೇನ್ಗೆ ಆಯುಧ ಸರಬರಾಜು ಮಾಡುತ್ತಿದ್ದಂತೆ ರಷ್ಯಾ ಆರು ದೇಶಗಳಿಗೆ ಅನಿಲ ಪೂರೈಕೆ ಸ್ಥಗಿತಗೊಳಿಸಿ, ಇನ್ನೂ ಆರು ದೇಶಗಳಿಗೆ ಕಡಿತಗೊಳಿಸಿತ್ತು.
ಕಳೆದ ಶನಿವಾರ ಕ್ರಿಮಿಯಾ ಸೇತುವೆಗೆ ಹಾನಿಯಾದ ಸ್ಫೋಟಕ್ಕೆ ಸಂಬಂಧಿಸಿದಂತೆ ಐವರು ರಷ್ಯನ್ನರು ಮತ್ತು ಉಕ್ರೇನ್ ಮತ್ತು ಅರ್ಮೇನಿಯಾದ ಮೂವರು ನಾಗರಿಕರನ್ನು ಬಂಧಿಸಲಾಗಿದೆ ಎಂದು ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವಿಸ್ ಬುಧವಾರ ತಿಳಿಸಿದೆ.
ಬಿಗ್ ಬಾಸ್ ಮನೆಯಲ್ಲಿದ್ದಾರೆ ‘ಲೈಂಗಿಕ ಕಿರುಕುಳದ ಆರೋಪಿ’ : ಕೇಂದ್ರ ಸಚಿವರಿಗೆ ಮಹಿಳಾ ಆಯೋಗದಿಂದ ಪತ್ರ
BIGG NEWS : ಬೆಳಗಾವಿಯಲ್ಲಿ ಮಳೆಯ ಅರ್ಭಟಕ್ಕೆ ಗ್ರಾಮಗಳು ಜಲಾವೃತ : ಹಳ್ಳದಾಟಿ ಪಲ್ಲಕ್ಕಿ ಹೊತ್ತೊಯ್ದ ಭಕ್ತರು