ಮಂಗಳೂರು : ಶಾರದಾ ಮಹೋತ್ಸವದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಸಂಬಂಧ ಇದೀಗ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದ್ದು, ದೈವರ ಮೊರೆಹೊಕ್ಕ ಬಳಿಕ ಕಿಡಿಕೇಡಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಕರಾವಳಿಯಲ್ಲಿ ಮತ್ತೆ ಕೋಮು ಸಂಘರ್ಘಕ್ಕೆ ಸಂಚು ರೂಪಿಸಲಾಗಿದ್ದು, ಶಾರದೋತ್ಸವದ ನಿಮಿತ್ತ ಹಾಕಲಾಗಿದ್ದ, ಬ್ಯಾನರ್ ಹರಿದು ಕೋಮುಗಲಭೆ ಸೃಷ್ಟಿಸಲು ಪ್ಲ್ಯಾನ್ ಮಾಡಿದ್ದಾರೆಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐದಾರು ಬ್ಯಾನರ್ ಹರಿದು ಸಂಘರ್ಷ ಸೃಷ್ಟಿಸಲು ಪ್ಲ್ಯಾನ್ ಮಾಡಿ ಅನ್ಯದರ್ಮಿಯರ ಮೇಲೆ ಅನುಮಾನ ಬರುವಂತೆ ಕೃತ್ಯ ಎಸಗಲಾಗಿತ್ತು.
ಇದರಿಂದ ಬೇಸತ್ತ ಭಕ್ತರೊಬ್ಬರು ಕಾರ್ನಿಕ ಗುಳಿಗ ದೈವರ ಮೊರೆ ಹೊಕ್ಕಿದ್ದಾರೆ. ಸೋಜಿಗದ ಸಂಗತಿಯೆಂದರೆ ದೈವಕ್ಕೆ ಮೊರೆಯಿಟ್ಟ ಕೆಲವೇ ಗಂಟೆಗಳಲ್ಲಿ ಕಿಡಿಗೇಡಿಗಳ ಬಂಧನನವಾಗಿದೆ.
ಬಂಧಿತರನ್ನು ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿ ಎಂದು ಗುರುತಿಸಲಾಗಿದೆ. ಈ ಮೂವರು ಆರೋಪಿಗಳು ಮಂಗಳೂರಿನ ಹೊರ ವಲಯದ ವಾಮಂಜೂರು ಬಳಿ ಶಾರದೋತ್ಸವಕ್ಕೆ ಅಳವಡಿಸಿದ ಬ್ಯಾನರ್ ಹರಿದು ಹಾಕಿದ್ದರು. ಕರಾವಳಿಯಲ್ಲಿ ಮತ್ತೆ ಕೋಮು ಸಂಘರ್ಘಕ್ಕೆ ಸಂಚು ರೂಪಿಸಲಾಗಿದ್ದು, ಶಾರದೋತ್ಸವದ ನಿಮಿತ್ತ ಹಾಕಲಾಗಿದ್ದ, ಬ್ಯಾನರ್ ಹರಿದು ಕೋಮುಗಲಭೆ ಸೃಷ್ಟಿಸಲು ಪ್ಲ್ಯಾನ್ ಮಾಡಿದ್ದಾರೆಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
BIGG NEWS: ಸರ್ಕಾರಿ ಶಾಲೆಗಳಿಗೆ RSS ಶಿಬಿರ; ಅನುಮತಿ ನೀಡದಂತೆ ಜೆಡಿಎಸ್ ಶಾಸಕನ ಒತ್ತಾಯ
ಮಂಗಳೂರಿನಲ್ಲಿ ಡೆತ್ ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ‘PSI’