ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್(Amitabh Bachchan) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 80 ನೇ ವಸಂತಕ್ಕೆ ಕಾಲಿಟ್ಟರುವ ಬಿಗ್ ಬಿ ಗೆ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ನಟ ಅಮಿತಾಭ್ ಬಚ್ಚನ್ ಅವರ 80 ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶುಭ ಕೋರಿದ್ದಾರೆ. “ಅಮಿತಾಬ್ ಭಾರತದ ಅತ್ಯಂತ ಗಮನಾರ್ಹ ಚಲನಚಿತ್ರ ನಟರಲ್ಲಿ ಒಬ್ಬರು, ಅವರು ತಲೆಮಾರುಗಳಾದ್ಯಂತ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ ಮತ್ತು ಮನರಂಜಿಸಿದ್ದಾರೆ. ಅವರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲಿ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಮೋದಿ ಟ್ವೀಟ್ ಗೆ ಪ್ರತಿಕ್ರಿಯಿಸಿದ ಬಚ್ಚನ್ ‘ “ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ… ಶುಭಾಶಯಗಳು. ನಿಮ್ಮ ಆಶೀರ್ವಾದದ ಮಾತುಗಳು ಯಾವಾಗಲೂ ನನಗೆ ಸ್ಫೂರ್ತಿಯ ಸೆಲೆಯಾಗುತ್ತವೆ” ಎಂದು ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.
ಇನ್ನೂ, ಕಳೆದ ರಾತ್ರಿ ಮುಂಬೈನಲ್ಲಿರುವ ಅಮಿತಾಭ್ ಅವರ ಮನೆಯ ಜಲ್ಸಾದಲ್ಲಿ ಹಲವಾರು ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗೆ ಶುಭ ಹಾರೈಸಲು ಜಮಾಯಿಸಿದ್ದರು. ಈ ವೇಳೆ ಅಭಿಮಾನಿಗಳಿಗೆ ಅಮಿತಾಭ್ ತಮ್ಮ ದರ್ಶನ ಭಾಗ್ಯ ನೀಡಿದರು.
BIGG NEWS : ಮುಂದಿನ ವರ್ಷ ಜ.15 ರಂದು ಬೆಂಗಳೂರಿನಲ್ಲಿ ‘ಭಾರತೀಯ ಸೇನಾ ದಿನದ ಪರೇಡ್’ |Army Day parade