ಬೆಂಗಳೂರು : ಅಗಸ್ಟ್ ತಿಂಗಳಲ್ಲಿ ಹಾಸನದಲ್ಲಿ ನಡೆದಿದ್ದ ಅಗ್ನಿಪಥ್ ನೇಮಕಾತಿ ಶಿಬಿರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕ್ಟೋಬರ್ 16 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.
BIGG NEWS : ನಾಪತ್ತೆಯಾಗಿದ್ದ ತಾಯಿ, ಮೂವರು ಪುತ್ರಿಯರ ಶವ ಬಾವಿಯಲ್ಲಿ ಪತ್ತೆ!
ಅಕ್ಟೋಬರ್ 16 ರಂದು ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಅಗ್ನಿಪಥ್ ನೇಮಕಾತಿ ಶಿಬಿರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನ ಗೇಟ್ ನಂ.2 ರಲ್ಲಿ ಅಕ್ಟೋಬರ್ 16 ರಂದು ನಸುಕಿನ 4 ಗಂಟೆಗೆ ಹಾಜರಾಗಬೇಕು. ಅಭ್ಯರ್ಥಿಗಳು ಕರಿ ಅಥವಾ ನೀಲಿ ಶಾಯಿಯ ಪೆನ್ನು ಮತ್ತು ಯಾವುದೇ ಗುರುತುಗಳಿಲ್ಲದ ಕ್ಲಿಪ್ ಬೋರ್ಡ್ ತರುವಂತೆ ಸೂಚಿಸಲಾಗಿದೆ.
BIGG NEWS : ಹಾವೇರಿ 86 ನೇ `ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ದಿನಾಂಕ ನಾಳೆ ಘೋಷಣೆ