ಉಡುಪಿ: ಉಡುಪಿಯ ಕೊಡಚಾದ್ರಿ ಬೆಟ್ಟ ಸೇರಿದಂತೆ ದೇಶಾದ್ಯಂತ ಸುಮಾರು 18 ಕಡೆಗಳಲ್ಲಿ ರೋಪ್ವೇ ಯೋಜನೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದೀಗ ಕೊಲ್ಲೂರಿನಿಂದ ಕೊಡಚಾದ್ರಿ ಬೆಟ್ಟಕ್ಕೆ ತೆರಳುವ ರೋಪ್ ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ರೋಪ್ ವೇ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಟೆಂಡರ್ ಕರೆಯಲು ನಿರ್ಧರಿಸಿದೆ.
ರೋಪ್ ವೇ ನಿರ್ಮಾಣದ ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧ ಕೇಳಿಬಂದಿತ್ತು. ರೋಪ್ ವೇ ನಿರ್ಮಾಣದಿಂದ ಪರಿಸರ ನಾಶವಾಗುತ್ತದೆ ಎಂದು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದರು. ರೋಪ್ ವೇ ನಿರ್ಮಾಣದಿಂದ ಅನೇಕ ಮಂದಿಗೆ ಉದ್ಯೋಗ ಲಭಿಸಿದೆ ಎನ್ನಲಾಗಿದೆ. ಸುಮಾರು 6.68 ಕಿ,ಮೀ ಉದ್ದದ ರೋಪ್ ವೇ ನಿರ್ಮಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ.
ಕರ್ನಾಟಕದ ಕೊಡಚಾದ್ರಿ ಬೆಟ್ಟಕ್ಕೆ ಸುಮಾರು 7 ಕಿ.ಮೀ ಉದ್ದದ ರೋಪ್ವೇಯನ್ನು ನಿರ್ಮಿಸಲು ಕೇಂದ್ರ ಯೋಜಿಸಿದೆ. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅರುಣಾಚಲ ಪ್ರದೇಶ, ಮಣಿಪುರ, ತಮಿಳುನಾಡು, ಆಂಧ್ರಪ್ರದೇಶ, ತಮಿಳುನಾಡು, ಲೇಹ್, ಸೇರಿದಂತೆ ಒಟ್ಟು 18 ಕಡೆಗಳಲ್ಲಿ ರೋಪ್ವೇ ನಿರ್ಮಾಣದ ಯೋಜನೆ ಒಳಗೊಂಡಿದೆ.
BIG NEWS: 25 ಲಕ್ಷ ಜನರಿಂದ 163.27 ಕೋಟಿ ದಂಡ ವಸೂಲಿ ಮಾಡಿದ ರೈಲ್ವೆ ಇಲಾಖೆ
ತುಳಿತಕ್ಕೊಳಗಾದವರಿಗೆ ಸಮಾನ ಅವಕಾಶ ಹಾಗೂ ಸ್ವಾಭಿಮಾನದ ಬದುಕು ಕಲ್ಪಿಸಲು ಸರ್ಕಾರ ಬದ್ಧ- CM ಬೊಮ್ಮಾಯಿ
BIGG NEWS : `SSLC’ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭ