ಮಡಿಕೇರಿ : ಕಾರ್ಮಿಕ ಇಲಾಖೆಯು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಫಲಾನುಭವಿಗಳಿಗೆ ಉಚಿತ ಬಸ್ಪಾಸ್ ಒದಗಿಸಲಾಗುವುದು. ಈ ಮಂಡಳಿಯಲ್ಲಿ ಈಗಾಗಲೇ ನೋಂದಾಯಿಸಿರುವ ಫಲಾನುಭವಿಗಳು ತಮ್ಮ ವಾಸಸ್ಥಳಕ್ಕೆ ಹತ್ತಿರದಲ್ಲಿರುವ ಕರ್ನಾಟಕ ಒನ್/ ಗ್ರಾಮ ಸೇವಾ ಒನ್ ಸೆಂಟರ್ಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು.
Solar Eclipse 2022 : ಅಕ್ಟೋಬರ್ 25ಕ್ಕೆ ಕೊನೆಯ ʻಸೂರ್ಯಗ್ರಹಣʼ : ಎಲ್ಲೆಲ್ಲಿ ಗೋಚರವಾಗಲಿದೆ ಗೊತ್ತಾ?
ಅರ್ಜಿ ಸಲ್ಲಿಸುವಾಗ ಕಾರ್ಮಿಕ ಕಲ್ಯಾಣ ಇಲಾಖೆಯವರು ನೀಡಿರುವ ಗುರುತಿನ ಚೀಟಿಯನ್ನು ಹಾಗೂ ಆಧಾರ್ ಕಾರ್ಡನ್ನು ಹಾಜರುಪಡಿಸಿ, ಉಚಿತ ಪಾಸ್ ಪಡೆದುಕೊಳ್ಳಬಹುದು.
ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ 07 ಹಂತಗಳವರೆಗೆ(45 ಕಿ.ಮೀ.) ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ಪಾಸುದಾರರು ಕ.ರಾ.ಸಾ.ನಿಗಮ, ವಾ.ಕ.ರ.ಸಾ ನಿಗಮ ಹಾಗೂ ಕ.ಕ.ರ.ಸಾ ನಿಗಮದ ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ. ಪಾಸುದಾರರು ಮೂಲ ಪಾಸುಗಳನ್ನು ಮಾತ್ರ ಜೊತೆಯಲ್ಲಿಟ್ಟು ಪ್ರಯಾಣಿಸುವುದು ಕಡ್ಡಾಯವಿರುತ್ತದೆ. ಪಾಸಿನ ನಕಲು ಪ್ರತಿ/ ಕಲರ್ ಜೆರಾಕ್ಸ್ ಪಾಸುಗಳನ್ನು ನಿಗಮದ ಬಸ್ಸುಗಳಲ್ಲಿ ಮಾನ್ಯ ಮಾಡಲಾಗುವುದಿಲ್ಲ.
ಈ ಬಸ್ ಪಾಸ್ ಪಡೆಯುವ ಬಗ್ಗೆ ಹೆಚ್ಚಿನ ಮಾಹಿತಿಗೆ ಕಾರ್ಮಿಕ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 155214 ನ್ನು ಸಂಪರ್ಕಿಸಬಹುದು ಎಂದು ಪುತ್ತೂರು ವಿಭಾಗದ ಕರಾರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.