ಚಿತ್ರದುರ್ಗ : ಚಿತ್ರದುರ್ಗದ ಮುರುಘಾಮಠದ ರಾಜಾಂಗಣದಲ್ಲಿದ್ದ 47 ಫೊಟೋಗಳು ಕಳುವಾಗಿದ್ದು, ಈ ಸಂಬಂಧ ಚಿತ್ರದುರ್ಗ ಗ್ರಾಮೀಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ರಾಜ್ಯದ ‘108 Ambulance’ ಸಿಬ್ಬಂದಿಗಳಿಗೆ ವಾರದೊಳಗೆ ಬಾಕಿ ವೇತನ ಬಿಡುಗಡೆ : ಜಿವಿಕೆ’ ಸಂಸ್ಥೆ ಭರವಸೆ
ಮುರುಘಾಮಠದ ಪೀಠಾಧಿಪತಿ ಅವರೊಂದಿಗೆ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಇರುವ ಛಾಯಾಚಿತ್ರಗಳನ್ನು ಮಠದ ರಾಜಾಂಗಣದೊಳಗೆ ಅಳವಡಿಸಲಾಗಿತ್ತು. ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಗುರುವಾರ ಶೂನ್ಯ ಪೀಠಾರೋಹಣ ಹಾಗೂ ಬಸವಣ್ಣ, ಅಲ್ಲಮಪ್ರಭು ದೇವರ ಭಾವಚಿತ್ರಗಳ ಮೆರವಣಿಗೆ ವೇಳೆ ಫೋಟೋಗಳು ಇಲ್ಲದಿರುವುದು ಬೆಳಕಿಗೆ ಬಂದಿವೆ.
ಮಠದಲ್ಲಿನ ಫೋಟೋಗಳ ಕಳವು ಪ್ರಕರಣ ಕುರಿತಂತೆ ಎಸ್ ಜೆಎಂ ಕಾರ್ಯದರ್ಶಿ ಎಸ್.ಬಿ.ವಸ್ತ್ರಮಠ, ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ ಪಿ ಪರಶುರಾಮ್ ತಿಳಿಸಿದ್ದಾರೆ.