ನವದೆಹಲಿ : ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ 35 ಕಡೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಮಹತ್ವದ ದಾಖಲೆ ಗಳನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಅಬಕಾರಿ ನೀತಿ ಅನುಷ್ಟಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ 35 ಕಡೆ ದಾಳಿ ನಡೆದಿದೆ.
ದೆಹಲಿ, ಪಂಜಾಬ್, ಹೈದರಾಬಾದ್ ಮದ್ಯ ವಿತರಕರು, ಕಂಪನಿಗಳು, ಭಾಗಿದಾರ ಸಂಸ್ಥೆಗಳಿಗೆ ಸೇರಿದ ವಿವಿಧ ಕಡೆ ದಾಳಿ ನಡೆಯಿತು. ಕೆಲವು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಇದುವರೆಗೆ ಸುಮಾರು 103 ಕಡೆ ದಾಳಿ ನಡೆಸಿದೆ.
BIGG NEW : ಭಾರತ-ಚೀನಾ ಪರಿಸ್ಥಿತಿ ‘ಇನ್ನೂ ಸಹಜವಾಗಿಲ್ಲ’ : ವಿದೇಶಾಂಗ ಸಚಿವಾಲಯ