ಬೆಂಗಳೂರು: ನೀರು ಸರಬರಾಜು ಕೊಳವೆ ಮಾರ್ಗದಲ್ಲಿನ ದುರಸ್ತಿ ಕಾರ್ಯದಿಂದಾಗಿ, ದಿನಾಂಕ 07-10-2022ರ ನಾಳೆ ಬೆಂಗಳೂರಿನ ಅನೇಕ ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ( Water Supply ) ಉಂಟಾಗಲಿದೆ.
ಈ ಬಗ್ಗೆ ಬೆಂಗಳೂರು ಜಲಮಂಡಳಿಯಿಂದ ( Bangalore Water Board ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಜಲಮಂಡಳಿಯ 4ನೇ ಹಂತ 1ನೇ ಘಟ್ಟದ ವ್ಯಾಪ್ತಿಗೆ ಒಳಪಡುವ ಜೆಡಿ ಮರ ಬನ್ನೇರುಘಟ್ಟ ರಸ್ತೆ ಸಮೀಪ ಹಾಲಿ ಇರುವ ಕೊಳವೆ ಮಾರ್ಗಕ್ಕೆ ಹೊಸದಾಗಿ 900 ಮಿಮೀ ವ್ಯಾಸದ ನೀರು ಸರಬರಾಜು ಮಾಡುವ ಕೊಳವೆ ಮಾರ್ಗವನ್ನು ಜೋಡಣೆ ಮಾಡವ ಕಾಮಗಾರಿ ನಾಳೆ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ನಾಳೆ ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದಿದೆ.
ನಾಳೆ ಜೆಪಿ ನಗರ 4ನೇ ಹಂತದಿಂದ 8ನೇ ಹಂತದವರೆಗಿನ ಪುಟ್ಟೇನಹಳ್ಳಿ, ಜರಗನಹಳ್ಳಿ, ಆರ್ ಬಿಐ ಲೇಔಟ್, ಪಾಡುರಂಗ ನಗರ, ಅರಕೆರೆ, ಮೈಕೋಲೇಔಟ್, ದೊರೆಸ್ವಾಮಿ ಪಾಳ್ಯ, ಕೊತ್ತನೂರು ದಿಣ್ಣೆ, ವೆಂಕಟಾದ್ರಿ ಲೇಔಟ್, ಚುಂಚಘಟ್ಟ, ಕೋಣನಕುಂಟೆ, ಎಸ್ ಬಿಎಂ ಲೇಔಟ್, ಸುಪ್ರೀಂ ರೆಸಿಡೆನ್ಸಿ ಲೇಔಟ್, ಲೇಕ್ ಸಿಟಿ, ನಾದಮ್ಮ ಲೇಔಟ್, ರೋಟರಿ ನಗರ, ಕೋಡಿಚಿಕ್ಕನಹಳ್ಳಿ, ಹೆಚ್ ಎಸ್ ಆರ್ ಲೇಔಟ್ 1ನೇ ಸೆಕ್ಟರ್ ನಿಂದ 7ನೇ ಸೆಕ್ಟರ್ ವರೆಗ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇನ್ನೂ ಅರಗ ವಿಲೇಜ್, ಮಂಗಮ್ಮನಪಾಳ್ಯ, ಮದೀನ ನಗರ, ಐಟಿಐ ಲೇಔಟ್, ಹೊಸಪಾಳ್ಯ, ಬಂಡೇಪಾಳ್ಯ, 4ನೇ ಟಿ ಬ್ಲಾಕ್ ಜಯನಗರ, ಬಿಬಿ ರಸ್ತೆ ಪಾರ್ಟ್ ಆಫ್ 3ನೇ ಹಂತ 2ನೇ ಘಟ್ಟ, ಬಿಜಿ ರಸ್ತೆ, ಈಸ್ಟ್ ರಸ್ತೆ, ಎನ್ ಎ ಸಿ ಲೇಔಟ್, ತಿಲಕನಗರ, ಜಯದೇವ ಆಸ್ಪತ್ರೆ, ಬಿಟಿಎಂ 2ನೇ ಮತ್ತು 3ನೇ ಹಂತ, ಕೆಎಸ್ ಕಾಲೋನಿ, ಮಡಿವಾಳ, ತಾವರೆಕೆರೆ, ಐಕ್ಯೂಬ್ ನಗರ, ನಾರಾಯಣಪ್ಪ ಗಾರ್ಡನ್, ಡಾಲರ್ಸ್ ಕಾಲೋನಿ, ಸೋಮೇಶ್ವರ ಕಾಲೋನಿ, ವೆಂಕಟಾಪುರ, ಟೀಚರ್ಸ್ ಕಾಲೋನಿ, ಸಿದ್ಧಾರ್ಥ ಕಾಲೋನಿ, ಕೋರಮಂಗಳ 4ನೇ ಇ ಪ್ಲಾಕ್ ಮತ್ತು ಜೆ ಪ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಸೀಮಿತ ಬಳಕೆದಾರರಿಗೆ ಜಿಯೋ 5G Welcome ಆಫರ್ ಘೋಷಣೆ ; ಸೇವೆ ಪಡೆಯುವುದು ಹೇಗೆ ಗೊತ್ತಾ??