ಸೂರತ್ : ಬಟ್ಟೆ ಕಾರ್ಖಾನೆಯೊಂದರಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಸೂರತ್ನ ಭತರ್ ಪ್ರದೇಶದಲ್ಲಿ ನಡೆದಿದೆ.
BIGG NEWS: ಕೊಡಚಾದ್ರಿ ಬೆಟ್ಟ ಸೇರಿದಂತೆ ಸುಮಾರು 18 ಕಡೆಗಳಲ್ಲಿ ರೋಪ್ವೇ
ಶಾಂತಿವನ ಪ್ರಿಂಟ್ಸ್ನಲ್ಲಿ ಈ ಘಟನೆ ನಡೆದಿದ್ದು, ಎಂಟು ಕಾರ್ಮಿಕರು ಬಟ್ಟೆಗಳೊಂದಿಗೆ ಮೂರನೇ ಮಹಡಿಯಿಂದ ನೆಲ ಮಹಡಿಗೆ ಬರುತ್ತಿದ್ದರು. ಇದ್ದಕ್ಕಿದ್ದಂತೆ ಲಿಫ್ಟ್ ಕೇಬಲ್ ತುಂಡಾಗಿ ಸುಮಾರು 30 ಅಡಿ ಎತ್ತರದಿಂದ ಬಿದ್ದಿದೆ. ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಖತೋದರಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ತಕ್ಷಣ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರು ಸ್ಥಳದಲ್ಲಿ ಜಮಾಯಿಸಿ ಸಂತ್ರಸ್ತರನ್ನು ಆಸ್ಪತ್ರೆಗೆ ರವಾನಿಸಿದ್ದರು. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳೆಲ್ಲ ಸೂರತ್ನ ಪಾಂಡೆಸರಾ ಪ್ರದೇಶದ ನಿವಾಸಿಗಳಾಗಿದ್ದಾರೆ ಎನ್ನಲಾಗುತ್ತಿದೆ.
ಪೊಲೀಸರು ಗಾಯಾಳುಗಳು ಮತ್ತು ಕಾರ್ಖಾನೆಯ ಇತರ ಕಾರ್ಮಿಕರ ಹೇಳಿಕೆಗಳನ್ನು ತೆಗೆದುಕೊಂಡಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
BIGG NEWS : ‘RuPay ಕಾರ್ಡ್’ ಹೊಂದಿರುವವರಿಗೆ ಗುಡ್ ನ್ಯೂಸ್ ; ‘ಈ ಶುಲ್ಕ’ ವಿಧಿಸೋಲ್ಲ ಎಂದು ‘NPCI’ ಘೋಷಣೆ