ಗಾಜಿಯಾಬಾ : ಗಾಜಿಯಾಬಾದ್ನಲ್ಲಿ ಎಲ್ಇಡಿ ಟಿವಿ ಸ್ಫೋಟಗೊಂಡು 16 ವರ್ಷದ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಎಲ್ಇಡಿ ಟಿವಿ ಸ್ಫೋಟ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಸಾಹಿಬಾಬಾದ್ ಸರ್ಕಲ್ ಅಧಿಕಾರಿ ಸ್ವತಂತ್ರ ಕುಮಾರ್ ಸಿಂಗ್ ಹೇಳಿದ್ದಾರೆ.
ಟಿವಿ ಸ್ಪೋಟದಿಂದ ಕೊಠಡಿಯು ಬಿರುಕುಗಳು ಬಿಟ್ಟಿದ್ದು, ಹಾನಿ ಸಂಭವಿಸಿದೆ. ವೋಲ್ಟೇಜ್ ಏರಿಳಿತದಿಂದ ಘಟನೆ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ನಾನು ನನ್ನ ಪತಿ ಮತ್ತು ಮಗಳೊಂದಿಗೆ ನೆಲ ಮಹಡಿಯಲ್ಲಿದ್ದೆ. ಇದ್ದಕ್ಕಿದ್ದಂತೆ ಒಂದು ದೊಡ್ಡ ಸ್ಫೋಟ ಸಂಭವಿಸಿತು. ನನ್ನ ಪತಿ ನನ್ನ ಅತ್ತೆ ಮತ್ತು ಸೋದರ ಮಾವ ಮಹಡಿಯ ಮೇಲಿದ್ದಾರೆ ಎಂದು ಹೇಳಿ ಮೊದಲ ಮಹಡಿಗೆ ಓಡಿದರು. ಸ್ಫೋಟದ ಪರಿಣಾಮ ನಮ್ಮ ಮನೆಗೆ ಹಾನಿಯಾಗಿದೆ. ಇದರಿಂದ ಗೋಡೆಗಳು ಮತ್ತು ಮೇಲ್ಛಾವಣಿ ಆಳವಾದ ಬಿರುಕುಗಳನ್ನು ಅನುಭವಿಸಿದೆ ಎಂದು ಮೃತರ ಅತ್ತಿಗೆ ಮೋನಿಕಾ ಹೇಳಿದ್ದಾರೆ.
RAIN ALERT : ಮುಂದಿನ ಮೂರು ದಿನಗಳ ಕಾಲ ಯುಪಿ, ಉತ್ತರಾಖಂಡ ಸೇರಿದಂತೆ ಈ ರಾಜ್ಯಗಳಲ್ಲಿ ಭಾರೀ ಮಳೆ : IMD ಮುನ್ಸೂಚನೆ