ಕಲಬುರ್ಗಿ: ರಾಹುಲ್, ಪ್ರಿಯಾಂಕ ಅಧ್ಯಕ್ಷರಾಗಲು ಒಪ್ಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರ ( Congress President Election ) ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ನಾನು ಎಲ್ಲರ ಒತ್ತಾಯದ ಮೇರೆಗೆ ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ತತ್ವ, ಸಿದ್ಧಾಂತ ಬೆಂಬಲಿಸೋರು ನನ್ನ ಪರವಾಗಿ ನಿಲ್ಲುತ್ತಾರೆ ಎಂಬುದಾಗಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ( Mallikarjun Kharge ) ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಎಲ್ಲರಿಗೂ ಇದೆ. ಬಡತನ ನಿರ್ಮೂಲನೆ ಮಾಡಲು ನೆಹರು ಪ್ರಯತ್ನ ಮಾಡಿದರು. ಆದ್ರೇ ಬಿಜೆಪಿ ( BJP ), ಆರ್ ಎಸ್ ಎಸ್ ( RSS ) ಬಡತನವನ್ನು ಬೆಳೆಸುತ್ತಿದೆ ಎಂಬುದಾಗಿ ಕಿಡಿಕಾರಿದರು.
ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲಿವೆ – ಕಾಂಗ್ರೆಸ್ ಕಿಡಿ
ಕಲಬುರ್ಗಿಗೆ ಒಂದು ಚಾನ್ಸ್ ಸಿಕ್ಕಿದೆ. ಮುಂದೆ ಏನ್ ಆಗಲಿದೆ ಎಂಬುದನ್ನು ಕಾದು ನೋಡೋಣ ಎಂದರು.
ಇನ್ನು ಕಾಂಗ್ರೆಸ್ ನಾಯಕರು ಬೇಲ್ ಮೇಲೆ ಹೊರಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಕೇಸ್ ಇದ್ದವರು ಬಿಜೆಪಿಗೆ ಹೋಗಿ ಕ್ಲೀನ್ ಆಗಿಬಿಟ್ರಾ.? ಬಿಜೆಪಿಗೆ ಹೋದ ತಕ್ಷಣವೇ ಅವರು ಶುದ್ಧವಾದ್ರಾ.? ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆಯಾ.? ನಮ್ಮಲ್ಲಿ ಐದನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಗಾಂಧಿ ಕುಟುಂಬದವರು ಯಾರಿಗೂ ಬೆಂಬಲ ನೀಡಲ್ಲ ಎಂದರು.
BIGG NEWS : ದುಬೈನಲ್ಲಿ ‘ಭವ್ಯ ಹಿಂದೂ ದೇಗುಲ’ ಅನಾವರಣ ; ದಸರಾಗೂ ಮುನ್ನ ದಿನ ‘ದೇವತೆಗಳ ದರ್ಶನ’