ಧಾರವಾಡ: ಈಗಾಗಲೇ ಕೋಡಿಮಠ ಶ್ರೀಗಳು ( Kodi matt Sri ) ಹೇಳಿದಂತೆ ಮಳೆ ( Rain ), ಸಿಡಿಲು, ವಿದ್ಯುತ್ ಆಘಾತಕಾರಿ ಘಟನೆಗಳು ನಡೆದಿವೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಕೋವಿಡ್ ಸೋಂಕು ( Covid19 Virus ), ಮಳೆಯ ಮಗ್ಗೆ ಮತ್ತೊಂದು ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಅದೇನು ಅಂತ ಮುಂದೆ ಓದಿ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ( Kodi Mutt Seer Shivananda Shivayogi Rajendra Swami ), ಮಳೆಯ ಆತಂಕ ಇಲ್ಲಿಗೆ ಮುಗಿಯೋದಿಲ್ಲ. ಇನ್ನೂ ಮುಂದುವರೆಯಲಿದೆ. ಅದರಲ್ಲೂ ಕಾರ್ತೀಕ ಮಾಸದ ವೇಳೆಗೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂಬುದಾಗಿ ಆತಂಕಕಾರಿ ಭವಿಷ್ಯವನ್ನು ನುಡಿದ್ದಾರೆ.
ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲಿವೆ – ಕಾಂಗ್ರೆಸ್ ಕಿಡಿ
ಇನ್ನೂ ರಾಜ್ಯದಲ್ಲಿ ಮತ್ತಷ್ಟು ಅವಘಡಗಳು ಹೆಚ್ಚಾಗಲಿವೆ. ಪ್ರಕೃತಿಯ ಮುನಿಸು ಹೆಚ್ಚಾಗಿ, ಅಲ್ಲೋಲ ಕಲ್ಲೋಲವೇ ಉಂಟಾಗಲಿದೆ. ಅಪಮೃತ್ಯುಗಳ ಸಂಖ್ಯೆ ಹೆಚ್ಚಲಿದೆ. ಬೆಂಕಿಯಿಂದ ಹೆಚ್ಚು ಹೆಚ್ಚು ಸಮಸ್ಯೆಯಾಗಲಿವೆ ಎಂಬುದಾಗಿ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ಕೊರೋನಾ ಸೋಂಕಿನ ತೀವ್ರತೆ ಕಡಿಮೆಯಾಯಿತು ಎನ್ನುವಂತ ನೆಮ್ಮದಿಯಲ್ಲಿದ್ದವರಿಗೆ, ಮತ್ತೊಂದು ಶಾಂಕಿಂಗ್ ಭವಿಷ್ಯವನ್ನು ಕೋಡಿಮಠ ಶ್ರೀಗಳು ನೀಡಿದ್ದಾರೆ. ಅದೇ ಈ ವರ್ಷ ಕಳೆಯುತ್ತಿದ್ದಂತೇ, ಮತ್ತೆ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ. ಅದರಲ್ಲೂ ಕೊರೋನಾ ಹೊಸ ರೂಪದಲ್ಲಿ ಮತ್ತೆ ಜನತೆಯನ್ನು ನಲುಗಿಸಲಿದೆ. ರೋಗ ಬಂದು ಹೋಗುವವೇಳೆಗೆ ಬಹಳ ಕಷ್ಟ ಕೊಟ್ಟು ಹೋಗಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.