ವಿಜಯಪುರ : ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀಗಳನ್ನು ಪದಚ್ಯುತಿಗೊಳಿಸ ಹೊಸ ಶ್ರೀಗಳನ್ನು ನೇಮಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
HEALTH TIPS: ಖಾಲಿ ಹೊಟಟೆಯಲ್ಲಿ ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್ ತಡೆಗಟ್ಟುತ್ತದೆ…! ತಜ್ಞರ ಮಾಹಿತಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾಶ್ರೀಗಳನ್ನು ಪದಚ್ಯುತಿಗೊಳಿಸ ಹೊಸ ಶ್ರೀಗಳನ್ನು ನೇಮಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ. ಮುರುಘಾ ಶ್ರೀಗಳ ಪೀಠತ್ಯಾಗಕ್ಕೆ ನಿರ್ದೇಶಿಸಬೇಕು. ತಾತ್ಕಾಲಿಕವಾಗಿ ಮೇಲುವಸ್ತುವಾರಿ ಸಮಿತಿ ರಚಿಸುವಂತೆ ಒತ್ತಾಯಿಸಿದ್ದೇನೆ ಎಂದರು.
ಮುರುಘಮಠದ ಬಳಿ ಸಾವಿರಾರು ಕೋಟಿ ರೂ. ಆಸ್ತಿ ಇದೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಬಹಳ ಅಪಮಾನವಾಗಿದೆ. ಮುರುಘಾಶ್ರೀಗಳು ಪೀಠತ್ಯಾಗ ಮಾಡದಿದ್ದರೆ ಭಕ್ತರೇ ಅವರನ್ನು ಉಚ್ಛಾಟನೆ ಮಾಡುತ್ತಾರೆ. ಮಠದಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಶಿವಮೊಗ್ಗ: 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಯ ದಾಖಲಾತಿ ಪರಿಶೀಲನೆಗೆ ತಂಡ ರಚನೆ
ಇನ್ನು ಮುರುಘಾಮಠದಲ್ಲಿ ಕೆಲ ಭ್ರಷ್ಟ ರಾಜಕಾರಣಿಗಳು ಹಣ, ದಾಖಲಾತಿ ಇಟ್ಟಿದ್ದಾರೆ. ಸ್ವಾಮೀಜಿ ಬಂಧಿಸಲು 6 ದಿನ ತಡವಾಗಿದ್ದು ಏಕೆ?ಇಬ್ಬರು ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ಕೊಡಬೇಕು. ಇಬ್ಬರು ಮಾಜಿ ಸಿಎಂಗಳು ಮುರುಘಾಶ್ರೀಗಳ ಪರಮ ಭಕ್ತರು. ಮಾಜಿ ಸಿಎಂ ಪುತ್ರ ಹೆಲಿಕಾಪ್ಟರ್ ನಲ್ಲಿ ಮುರುಘಾಮಠಕ್ಕೆ ಹೋಗ್ತಾರೆ ಎಂದರು.