ಚೆನ್ನೈ : ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಕೇರಳ ರಾಜ್ಯ ಕಾರ್ಯದರ್ಶಿ ಮತ್ತು ಪಾಲಿಟ್ ಬ್ಯೂರೋ ಸದಸ್ಯ ಕೊಡಿಯೇರಿ ಬಾಲಕೃಷ್ಣನ್ (69) ಶನಿವಾರ ನಿಧನರಾಗಿದ್ದಾರೆ. ಇನ್ನವ್ರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಉಸಿರು ಚೆಲ್ಲಿದ್ದಾರೆ.
ಬಾಲಕೃಷ್ಣನ್ ಕೆಲವು ಸಮಯದಿಂದ ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಎಂದು ಪಿಟಿಐ ವರದಿ ಮಾಡಿದೆ. ಅಂದ್ಹಾಗೆ, ಮಾರ್ಕ್ಸ್ ವಾದಿ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಬಾಲಕೃಷ್ಣನ್ ಅವರು 2015 ರಿಂದ 2022 ರವರೆಗೆ ಸಿಪಿಐಎಂನ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2006ರಿಂದ 2011ರವರೆಗೆ ವಿ ಎಸ್ ಅಚ್ಯುತಾನಂದನ್ ಸರ್ಕಾರದಲ್ಲಿ ಅನೇಕ ಬಾರಿ ಶಾಸಕರಾಗಿದ್ದರು ಮತ್ತು ಗೃಹ ಮತ್ತು ಪ್ರವಾಸೋದ್ಯಮ ವ್ಯವಹಾರಗಳ ಸಚಿವರಾಗಿದ್ದರು. ಅನಾರೋಗ್ಯದ ಕಾರಣ ಅವರು ಈ ವರ್ಷದ ಆಗಸ್ಟ್’ನಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
Former CPI(M) Kerala state secretary and Polit Bureau member Kodiyeri Balakrishnan passes away. He was undergoing treatment at a private hospital in Chennai
(File Pic) pic.twitter.com/k6ehX9CIHb
— ANI (@ANI) October 1, 2022