ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಡ್ಯಾನ್ಸ್ ವೀಡಿಯೋಗಳನ್ನು ನೋಡಿರಬಹುದು. ಆದ್ರೆ, ಇಂದು ನಾವು ನಿಮಗಾಗಿ ತಂದಿರುವ ವೀಡಿಯೊವನ್ನು ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ. ಅಚ್ಚರಿ ವೀಡಿಯೊವು ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ಏಳು ಯುವತಿಯರು ಸಂತೋಷದಿಂದ ನೃತ್ಯ ಮಾಡುವುದನ್ನ ಕಾಣಬಹುದು, ಇದ್ದಕ್ಕಿದ್ದಂತೆ ಅಪಘಾತ ಸಂಭವಿಸಿ ಅವರ ಎಲ್ಲಾ ಮೋಜುಗಳನ್ನ ಹಾಳು ಮಾಡಿದೆ. ನೃತ್ಯ ಮಾಡುತ್ತಿದ್ದ ಹುಡುಗಿಯರು, ಕ್ಷಣರ್ಧದಲ್ಲೇ ನೆಲದೊಳಗೆ ಹೂತು ಹೀಗಿದ್ದಾರೆ.
ಯೂಟ್ಯೂಬ್’ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ 7 ಜನ ಮಹಿಳೆಯರು ರಸ್ತೆಯಲ್ಲಿ ಡ್ಯಾನ್ಸ್ ಮಾಡುವುದನ್ನ ನೋಡುತ್ತೀರಿ. ಅವ್ರ ನೃತ್ಯದ ಬಲದಿಂದ ನೆಲ ಬಾಯ್ತಿರೆದಿದ್ದು, ಎಲ್ಲರೂ ಅದರೊಳಗೆ ಬೀಳುತ್ತಾರೆ. ವಾಸ್ತವವಾಗಿ ಬ್ರೆಜಿಲ್ನಲ್ಲಿ ರಸ್ತೆಯ ಸಿಂಕ್ಹೋಲ್ ತೆರೆದುಕೊಂಡಿದ್ದು, ನೃತ್ಯ ಮಾಡುತ್ಲೇ ಹುಡುಗಿರು ಅದರಲ್ಲಿ ಬಿದ್ದು ಬೀಡ್ತಾರೆ. ಈ ಭೀಕರ ಅಪಘಾತದ ನಂತ್ರ ಸಂಪೂರ್ಣ ವಾತಾವರಣ ಭಯಭಿತವಾಗಿದ್ದು, ಅವ್ರನ್ನ ಉಳಿಸುವ ಪ್ರಯತ್ನ ಪ್ರಾರಂಭವಾಗುತ್ತದೆ. ಈ ವೀಡಿಯೋ ನೋಡಿದ್ರೆ, ನೀವು ಆಶ್ಚರ್ಯ ಪಡುತ್ತೀರಿ.
ವಿಡಿಯೋ ನೋಡಿ.!