ಬಿಹಾರ: ದುರ್ಗಾ ದೇವಿಯ ಪೂಜೆಗೆಂದು ಇಡಲಾಗಿದ್ದ ಸೇಬು ಹಣ್ಣನ್ನು ತಿಂದ ಎಂಬ ಕಾರಣಕ್ಕೆ ಆರು ವರ್ಷದ ವಿದ್ಯಾರ್ಥಿಯನ್ನು ತನ್ನ ಶಾಲೆಯಲ್ಲಿ ಥಳಿಸಿ ಕೊಂದಿರುವ ಘಟನೆ ಗಯಾದಲ್ಲಿ ನಡೆದಿದೆ. ಇಲ್ಲಿನ ಬಾಕಿ ಬಿಘಾ ಗ್ರಾಮದ ಲಿಟಲ್ ಲೀಡರ್ಸ್ ಪಬ್ಲಿಕ್ ಸ್ಕೂಲ್ ಎಂಬ ಶಾಲೆ ನಡೆಸುತ್ತಿರುವ ಇಬ್ಬರನ್ನು ಬಂಧಿಸಲಾಗಿದೆ.
ಮೃತ ಬಾಲಕನ್ನು ವಿವೇಕ್ ಎಂದು ಗುರುತಿಸಲಾಗಿದೆ. ಶಾಲೆಯ ಆವರಣದೊಳಗೆ ದುರ್ಗಾಪೂಜೆ ಆಯೋಜಿಸಲಾಗಿತ್ತು. ಈ ವೇಳೆ ವಿವೇಕ್ ಪೂಜೆಗೆಂದು ಇಟ್ಟಿದ್ದ ಸೇಬು ಹಣ್ಣು ತಿಂದಿದ್ದಾನೆ. ಇದ್ರಿಂದ ಕೋಪಗೊಂಡ ಶಾಲಾ ಸಿಬ್ಬಂದಿಗಳು ಆತನನ್ನು ಶಾಲಾ ಕೊಠಡಿಗೆ ಕರೆದೊಯ್ದು ಥಳಿಸಿದ್ದಾರೆ. ನಂತರ ಅವನನ್ನು ಶಾಲೆಯಿಂದ ಹೊರಹಾಕಲಾಯಿತು.
ವಿವೇಕ್ ಶಾಲೆಯ ಗೇಟ್ನ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಆಟೋ ಡ್ರೈವರ್ ಅವನನ್ನು ಗುರುತಿಸಿ ಮನೆಗೆ ಕರೆತಂದನು. ನಂತ್ರ ಅವನನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ಮಾರ್ಗಮಧ್ಯೆ ವಿವೇಕ್ ಮೃತಪಟ್ಟಿದ್ದಾನೆ ಎಂದು ವಿವೇಕ್ ಅಜ್ಜ ಹೇಳಿದ್ದಾರೆ. ಸಾಯುವ ಮೊದಲು, ವಿವೇಕ್ ತನ್ನ ಎದೆಗೆ ಹೊಡೆದದ್ದನ್ನು ತನ್ನ ಕುಟುಂಬಕ್ಕೆ ತಿಳಿಸಿದ್ದಾನೆ.
ಘಟನೆ ಸಂಬಂಧ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಜೀರ್ಗಂಜ್ನ ಎಸ್ಎಚ್ಒ ರಾಮ್ ಎಕ್ಬಾಲ್ ಯಾದವ್ ಹೇಳಿದ್ದಾರೆ.
ರಾಹುಲ್ ಗಾಂಧಿ `ಭಾರತ್ ಜೋಡೋ ಯಾತ್ರೆ’ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆ : ಬಿಜೆಪಿ ಟ್ವೀಟ್