ಬೆಂಗಳೂರು: ರಾಜ್ಯದಲ್ಲಿ ದಸರಾ ಹಬ್ಬದ ಸಂಭ್ರಮ ಜೋರಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನವರಾತ್ರಿಯ ಸಂಭ್ರಮ ಕಳೆಗಟ್ಟಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಹೊರ ಭಾಗದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ಫುಲ್ ಎಂಜಾಯ್ ಆಗಿದೆ.
ದಸರಾ ಅಂಗವಾಗಿ ಏರ್ಪೊಟ್ ನ ಟರ್ಮಿನಲ್ ಹೊರ ಭಾಗದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ನಡೆಯುತ್ತಿದ್ದು ದಸರಾ ಅಂಗವಾಗಿ ಏರ್ಪೊಟ್ ಸಿಬ್ಬಂದಿ ಹಲವು ಹಾಡುಗಳಿಗೆ ಹೆಜ್ಜೆ ಹಾಕಿ ಪ್ರಯಾಣಿಕರನ್ನ ರಂಜಿಸುತ್ತಿದ್ದಾರೆ.
ವಿಮಾನ ನಿಲ್ದಾಣದ ಸಿಬ್ಬಂದಿಯೇ ವಿವಿಧ ರೀತಿಯ ಉಡುಗೆಗಳ ತೊಟ್ಟು ಹಲವು ಹಾಡಿಗೆ ಕುಣಿದು ಎಲ್ಲರನ್ನ ರಂಜಿಸುತ್ತಿದ್ದಾರೆ. ಸಿಬ್ಬಂದಿಯ ಜೊತೆ ಸೇರಿಕೊಂಡು ಪ್ರಯಾಣಿಕರು ಸಹ ಮಸ್ತ್ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಪ್ರತಿದಿನ ದಸರಾ ಹಿನ್ನಲೆ ಸಿಬ್ಬಂದಿಯಿಂದಲೇ ಮನರಂಜನಾ ಕಾರ್ಯಕ್ರಮ ನೀಡಲಾಗ್ತಿದೆ.