ಬೆಂಗಳೂರು: ನಗರದಲ್ಲಿ ಭಾರಿ ಮಳೆಗೆ ರಸ್ತೆ ಮತ್ತು ನಿವಾಸಗಳಿಗೆ ನೀರು ನುಗ್ಗಿ ಅವಾಂತರಗೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿತ್ತು. ಕೆಲ ದಿನಗಳಿಂದ ನಗರದಲ್ಲಿ ಜೆಸಿಬಿ ಘರ್ಜಿಸಿತ್ತು.
ಒತ್ತುವರಿ ಕಾರ್ಯಾಚರಣೆ ಮಳೆಗಾಲ ಅಧಿವೇಶನ ಸಮಯಲ್ಲಿ ಚುರುಕುಗೊಂಡಿತ್ತು. ಇದಾದ ಬಳಿಕ ಪ್ರಭಾವಿಗಳ ಸೇರಿದ ಕಟ್ಟಡಗಳು ಒತ್ತುವರಿ ತೆರವು ಕಾರ್ಯಾಚರಣೆ ವ್ಯಾಪ್ತಿಗೆ ಬಂದಿದೆ. ಹೀಗಿರುವಾಗಲೇ ಮಳೆಗಾಲದ ಅಧಿವೇಶನ ಮುಕ್ತಾಯಗೊಂಡಿತ್ತು. ಇದಾದ ನಂತರ ಬಿಬಿಎಂಪಿ ಜೆಸಿಬಿ ಹಾಗೂ ಬುಲ್ಡೋಜರ್ ಗಳು ನಿಂತಿ ಹೋಯ್ತು.
ಇನ್ನು ಒತ್ತುವರಿ ಕಾರ್ಯಾಚರಣೆ ಬಡ ಮತ್ತು ಮಧ್ಯಮ ವರ್ದವರಿಗೆ ಮಾತ್ರ ಸೀಮೀತವಾಗಿತ್ತಾ? ಎಂಬ ಪ್ರಶ್ನೆ ಮೂಡಿಬಂದಿತ್ತು. ಈ ನಡುವೆಯೇ ಹೈಕೋರ್ಟ್ ಒತ್ತುವರಿ ಕಾರ್ಯಾಚರಣೆ ವಿಳಂಬವಾಗುತ್ತಿರುವುದಕ್ಕೆ ಚಾಟಿ ಬೀಸಿದೆ. ಹೀಗಾಗಿ ಅಕ್ಟೋಬರ್ 25 ರೊಳಗೆ ಬಾಕಿ ಉಳಿದ ಒತ್ತುವರಿ ತೆರವು ಮಾಡಿ ಎಂದು ಬಿಬಿಎಂಪಿಗೆ ತಾಕೀತು ಮಾಡಿದೆ.