ಪಾಟ್ನಾ: ಸ್ಯಾನಿಟರಿ ಪ್ಯಾಡ್ಗಳನ್ನು ನೀಡುವಂತೆ ಕೇಳಿದ್ಕೆ ʻನಂತ್ರ ಕಾಂಡೋಮ್ ಕೇಳ್ತೀರಾʼ ಎಂದು ಬಿಹಾರದ ಐಎಎಸ್ ಅಧಿಕಾರಿಯಿಂದ ಅಣಕಿಸಲ್ಪಟ್ಟಿದ್ದ ವಿದ್ಯಾರ್ಥಿನಿಗೆ ಒಂದು ವರ್ಷ ಉಚಿತ ಸ್ಯಾನಿಟರಿ ಪ್ಯಾಡ್ ಪೂರೈಕೆ ಮಾಡಲಾಗುವುದು ಎಂದು ಸ್ಯಾನಿಟರಿ ಪ್ಯಾಡ್ ತಯಾರಿಕಾ ಕಂಪನಿಯೊಂದು ಹೇಳಿದೆ.
ಋತುಚಕ್ರದ ನೈರ್ಮಲ್ಯದ ಸಮಸ್ಯೆಗಳ ಬಗ್ಗೆ ಮತ್ತು ಸಬ್ಸಿಡಿ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ನೀಡುವಂತೆ ಒತ್ತಾಯಿಸಿ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ (ಡಬ್ಲ್ಯುಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್ ಕೌರ್ ಭಾಮ್ರಾ ಅವರಿಂದ ‘ಮುಂದೆ ಕಾಂಡೋಮ್ ಕೇಳಿ’ ಎಂಬ ವಿವಾದಾತ್ಮಕ ಹೇಳಿಕೆಯನ್ನು ಪಡೆದ ಪಾಟ್ನಾದ 19 ವರ್ಷದ ವಿದ್ಯಾರ್ಥಿನಿ ರಿಯಾ ಕುಮಾರಿಗೆ ಖಾಸಗಿ ತಯಾರಕ ಕಂಪನಿಯಿಂದ ಒಂದು ವರ್ಷದವರೆಗೆ ಸ್ಯಾನಿಟರಿ ನ್ಯಾಪ್ಕಿನ್ಗಳ ಉಚಿತ ಪೂರೈಕೆಯನ್ನು ನೀಡಲಾಗಿದೆ.
ರಿಯಾ ಪಾಟ್ನಾದ ಕಮಲಾ ನೆಹರು ನಗರದ ಕೊಳೆಗೇರಿಯಲ್ಲಿ ನೆಲೆಸಿದ್ದು, ಸ್ಥಳೀಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ಕುಟುಂಬದಲ್ಲಿ 10ನೇ ತರಗತಿ ತೇರ್ಗಡೆಯಾಗಿರುವ ಏಕೈಕ ವ್ಯಕ್ತಿ ಆಕೆ. ಕೂಲಿ ಕೆಲಸ ಮಾಡುತ್ತಿದ್ದ ಆಕೆಯ ತಂದೆ ಅನಾರೋಗ್ಯದಿಂದ ಕಳೆದ ವರ್ಷ ನಿಧನರಾದರು.
ಸ್ಯಾನಿಟರಿ ಪ್ಯಾಡ್ ತಯಾರಿಕಾ ಕಂಪನಿ PAN ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ ಸಾರ್ವಜನಿಕ ವೇದಿಕೆಯಲ್ಲಿ ಸ್ಪಷ್ಟವಾಗಿ ಮಾತನಾಡಲು ರಿಯಾ ಅವರ ಧೈರ್ಯವನ್ನು ಶ್ಲಾಘಿಸಿದ್ದು, ಸ್ಯಾನಿಟರಿ ಪ್ಯಾಡ್ಗಳ ವರ್ಷಪೂರ್ತಿ ಪೂರೈಕೆಯನ್ನು ಘೋಷಿಸಿದೆ.
“ಋತುಚಕ್ರದ ನೈರ್ಮಲ್ಯವನ್ನು ತಲೆಮಾರುಗಳಿಂದಲೂ ನಿಷೇಧಿತ ವಿಷಯವೆಂದು ಪರಿಗಣಿಸಲಾಗಿದೆ. ಇದು ಬದಲಾಗಬೇಕು. ನಮಗೆ ಇನ್ನೂ ಅನೇಕ ಹುಡುಗಿಯರು ಮುಕ್ತ ಚರ್ಚೆಗೆ ಮುಂದೆ ಬರಬೇಕು. ಸಾರ್ವಜನಿಕವಾಗಿ ಈ ವಿಷಯದ ಬಗ್ಗೆ ಮಾತನಾಡಲು ರಿಯಾ ಅವರ ಧೈರ್ಯವನ್ನು ನಾವು ಮೆಚ್ಚುತ್ತೇವೆ ”ಎಂದು ಪ್ಯಾನ್ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಚಿರಾಗ್ ಪಾನ್ ತಿಳಿಸಿದ್ದಾರೆ.
ದೆಹಲಿ: ಸ್ನೇಹಿತರಿಂದಲೇ ಲೈಂಗಿಕ ದೌರ್ಜನ್ಯ ಪ್ರಕರಣ, ಚಿಕಿತ್ಸೆ ಫಲಿಸದೇ 10 ವರ್ಷದ ಬಾಲಕ ಸಾವು