ತುಮಕೂರು: ಜಿಲ್ಲೆಯ ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್ ಮೇಲ್ ಆರೋಪ ಹಿನ್ನೆಲೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿತವಾಗಿದೆ.
BREAKING NEWS: ರಾಮನಗರದಲ್ಲಿ ಯೋಗೇಶ್ವರ್ V/S ಕುಮಾರಸ್ವಾಮಿ ಜಟಾಪಟಿ; ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ವಾಕ್ಸಮರ
ಸಹೋದರ ಪ್ರದೀಪ್ ವಾರಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ಸಬ್ಸಿಡಿ ಸಾಲ ಮಂಜೂರು ಮಾಡಿಕೊಡುವಂತೆ ನಗರ ಜೀವನೋಪಾಯ ಕೇಂದ್ರಕ್ಕೆ ಹೋಗಿದ್ದ. ಈ ವೇಳೆ ಲಂಚದಾಸೆ ತೋರಿಸಿ ವೀಡಿಯೋ ಮಾಡಿಕೊಂಡಿದ್ದ. ಬಳಿಕ ಈ ವೀಡಿಯೋ ತೋರಿಸಿ ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್ಸಿ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ನಿರಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.
BREAKING NEWS: ರಾಮನಗರದಲ್ಲಿ ಯೋಗೇಶ್ವರ್ V/S ಕುಮಾರಸ್ವಾಮಿ ಜಟಾಪಟಿ; ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ವಾಕ್ಸಮರ
ಘಟನೆ ಕುರಿತು ನಿನ್ನೆ ಸಂಜೆ ಆ ಯುವತಿ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾಗ ಅಲ್ಲಿದ್ದವರು ಧರ್ಮದೇಟು ಹಾಕಿದ್ದಾರೆ. ಅಷ್ಟೇ ಅಲ್ಲದೇ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರದೀಪ್ನ ಜೊತೆ ಬಂದಿದ್ದ ನಕಲಿ ಪತ್ರಕರ್ತರು ಸೇರಿ ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬಂದವರಿಗೂ ಗೂಸಾ ಬಿದ್ದಿದೆ.