ಬೆಳಗಾವಿ : ರಾಜ್ಯಾದ್ಯಂತ ಮಳೆಯ ಆರ್ಭಟ ಮತ್ತೆ ಶುರುವಾಗಿದ್ದು, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಹಲವಡೆ ಸೇತುವೆಗಳು ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
BREAKING NEWS: ರಾಮನಗರದಲ್ಲಿ ಯೋಗೇಶ್ವರ್ V/S ಕುಮಾರಸ್ವಾಮಿ ಜಟಾಪಟಿ; ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ವಾಕ್ಸಮರ
ಉತ್ತರ ಕರ್ನಾಟಕದ ಬೆಳಗಾವಿ, ಬಳ್ಳಾರಿ, ಕೊಪ್ಪಳ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ಬೆಳಗಲ್ ಗ್ರಾಮದಲ್ಲಿ ಅಂಗನವಾಡಿ ಜಲದಿಗ್ಭಂಧನವಾಗಿದೆ. ಅಂಗನವಾಡಿಯಲ್ಲಿನ ದವಸ, ಧಾನ್ಯಗಳು ನೀರುಪಾಲಾಗಿವೆ.
ಗದಗ ಜಿಲ್ಲೆಯಲ್ಲೂ ಭಾರೀ ಮಳೆಯಿಂದಾಗಿ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ನೀರಿನ ರಭಸಕ್ಕ ಕೊಚ್ಚಿ ಹೋಗುತ್ತಿದ್ದ ಲಾರಿ ಜಸ್ಟ್ ಮಿಸ್ ಆಗಿದೆ. ಹುಬ್ಬಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಗೆ ಹಳ್ಳ ಉಕ್ಕಿ ಹರಿಯುತ್ತಿದ್ದು, ಸಂಶಿ-ಚಾಕಲಬ್ಬಿ ನಡುವೆ ಬಸ್ ನಲ್ಲೇ ಪ್ರಯಾಣಿಕರ ಕಾಲ ಕಳೆದಿರುವ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಇಡಿ ಮಳೆ ಧಾರಕಾರವಾಗಿ ಸುರಿದೆ. ಇದರಿಂದ ಜನರು ಹೈರಾಣಾಗಿದ್ದಾರೆ. ಜಡಿ ಮಳೆಯಿಂದ ಅಥಣಿ ತಾಲೂಕಿನ ಹಳ್ಳ-ಕೊಳ್ಳಗಳು ಸಂಪೂರ್ಣ ಭರ್ತಿಯಾಗಿದೆ.
ಹೀಗಾಗಿ ಹಳ್ಳ ದಾಟಲು ತೆಲಸಂಗ ಗ್ರಾಮಸ್ಥರು ಪರಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಮಳೆಯಿಂದಾಗಿ ದೋಣಿ ಹಳ್ಳದ ತಾತ್ಕಾಲಿಕ ಸೇತುವೆ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಹಗ್ಗ ಹಿಡಿದು ಹಳ್ಳವನ್ನು ಮಕ್ಕಳು ವೃದ್ಧರು ದಾಟುತ್ತಿದ್ದಾರೆ.