ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅಕ್ಟೋಬರ್ 1 ರಂದು) 5 ಜಿ ಇಂಟರ್ನೆಟ್ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದು ದೇಶದ ಅಂತರ್ಜಾಲ ಸೇವೆಯಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆಯಲಿದೆ.
BIGG NEWS : ಕೇದಾರನಾಥ ದೇಗುಲದ ಹಿಂಭಾಗದ ಪರ್ವತಗಳ ಮೇಲೆ ಭಾರೀ ಹಿಮಪಾತ | Video Watch
ಮೊದಲ ಹಂತವಾಗಿ 5ಜಿ ದೂರಸಂಪರ್ಕ ಸೇವೆಯನ್ನು ಕೆಲ ಆಯ್ದ ನಗರಗಳಲ್ಲಿ ಮಾತ್ರ ಚಾಲನೆ ಸಿಗಲಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಇಡೀ ದೇಶಾದ್ಯಂತ ವ್ಯಾಪಿಸಲಿದೆ. ಈ ಮೂಲಕ ದೇಶ ಹೊಸ ಮಜಲಿಗೆ ತಿರುಗಲಿದೆ.
ಏನಿದು 5 ಜಿ ಇಂಟರ್ನೆಟ್ : 5ಜಿ ಎಂಬುದು 5ನೇ ಪೀಳಿಗೆಯ ಮೊಬೈಲ್ ನೆಟ್ವರ್ಕ್ ಆಗಿದೆ. 4 ಜಿಗಿಂತಲೂ 20 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಇದು ಒದಗಿಸುತ್ತದೆ. ಈ ಸುಧಾರಿತ ನೆಟ್ವರ್ಕ್ ಬಳಕೆದಾರರಿಗೆ ವಿಳಂಬ ಮುಕ್ತ ಸಂಪರ್ಕವನ್ನು ನೀಡುತ್ತದೆ.
BIGG NEWS : ಕೇದಾರನಾಥ ದೇಗುಲದ ಹಿಂಭಾಗದ ಪರ್ವತಗಳ ಮೇಲೆ ಭಾರೀ ಹಿಮಪಾತ | Video Watch
ಇಂದು ಪ್ರಧಾನಿ ಮೋದಿ ಅವರು ದೇಶದ ವಿವಿಧ 13 ನಗರಗಳಲ್ಲಿ ಅತಿವೇಗದ ಅಂತರ್ಜಾಲ ಸೇವೆಗೆ ಚಾಲನೆ ನೀಡುತ್ತಿದ್ದರೂ, ಈಗಾಗಲೇ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 5 ಜಿ ಸೇವೆ ಆರಂಭಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ವಿಸ್ತರಣೆ ಕಂಡು ದೇಶದೆಲ್ಲಾ ನಗರಗಳಿಗೂ 5 ಜಿ ಸಿಗಲಿದೆ.
BIGG NEWS : ಕೇದಾರನಾಥ ದೇಗುಲದ ಹಿಂಭಾಗದ ಪರ್ವತಗಳ ಮೇಲೆ ಭಾರೀ ಹಿಮಪಾತ | Video Watch
5 ಜಿ ಹೈ ಸ್ಪೀಡ್ ವೇಗ ಎಷ್ಟಿದೆ : 4 ಜಿ ನೆಟ್ವರ್ಕ್ಗಿಂತ 5 ಜಿ 20 ಪಟ್ಟು ವೇಗವಾಗಿರುತ್ತದೆ. 4ಜಿ ಪ್ರತಿ ಸೆಕೆಂಡಿಗೆ 1 ಜಿಬಿಪಿಎಸ್ ಇದ್ದರೆ, 5ಜಿ 20 ಗಿಗಾಬೈಟ್ ಇರುತ್ತದೆ. ಹೀಗಾಗಿ ಇದು ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತರಲಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುವ ನಿರೀಕ್ಷೆ ಇದೆ.
4 ಜಿ ಬೆಲೆಗೆ 5 ಜಿ ಸೇವೆ ಸಿಗಲಿದೆ ಎಂದು ದೂರಸಂಪರ್ಕ ಕಂಪನಿಗಳು ಹೇಳಿದ್ದರೂ, ಇವುಗಳ ಮೊತ್ತ ಹೆಚ್ಚಿಸುವ ಸಾಧ್ಯತೆ ಇದೆ. ನೂತನ ನೆಟ್ವರ್ಕ್ ಈಗಿನವುಗಳ ಬದಲಾಗಿ 5 ಜಿ ತಂತ್ರಾಂಶವುಳ್ಳ ಮೊಬೈಲ್ಗಳಲ್ಲಿ ಮಾತ್ರ ಲಭ್ಯವಾಗಲಿದೆ.
BIGG NEWS : ಕೇದಾರನಾಥ ದೇಗುಲದ ಹಿಂಭಾಗದ ಪರ್ವತಗಳ ಮೇಲೆ ಭಾರೀ ಹಿಮಪಾತ | Video Watch
1 ಜಿ- ಈ ನೆಟ್ವರ್ಕ್ 1980 ರಲ್ಲಿ ಪರಿಚಯಿಸಲಾಯಿತು. ಇದು ಅನ್ಲಾಗ್ ಧ್ವನಿ ಮಾತ್ರ ರವಾನಿಸುತ್ತಿತ್ತು.
2 ಜಿ- 1990 ರಲ್ಲಿ ಪರಿಚಯಿಸಲಾದ ಇದು ಡಿಜಿಟಲ್ ಧ್ವನಿ ಕರೆಗೆ ನೆರವಾಯಿತು
3 ಜಿ- 2000ನೇ ದಶಕದಲ್ಲಿ ಬಂದ ಈ ನೆಟ್ವರ್ಕ್ ಸೇವೆ ಮೊಬೈಲ್ ಡೇಟಾ ಬಳಕೆಗೆ ಸಿಕ್ಕಿತು.
4 ಜಿ- 2010 ರಲ್ಲಿ ಪರಿಚಯಿಸಿದ ಇದು ಮೊಬೈಲ್ ಬ್ರಾಡ್ಬ್ಯಾಂಡ್ ಅನ್ನು ಪರಿಚಯಿಸಿತು.
5 ಜಿ- 2022 ಅತಿ ವೇಗದ ನೆಟ್ವರ್ಕ್ ಹೊಂದಿದ 73 ನೇ ರಾಷ್ಟ್ರವಾಗಿ ಭಾರತ ದಾಖಲಿಸಲಿದೆ
BIGG NEWS : ಕೇದಾರನಾಥ ದೇಗುಲದ ಹಿಂಭಾಗದ ಪರ್ವತಗಳ ಮೇಲೆ ಭಾರೀ ಹಿಮಪಾತ | Video Watch